ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಧ್ವನಿ ಎತ್ತಿದ ಬಾಲಿವುಡ್ ಸೆಲೆಬ್ರಿಟಿಗಳು

Sampriya
ಗುರುವಾರ, 15 ಆಗಸ್ಟ್ 2024 (19:46 IST)
Photo Courtesy X
ಮುಂಬೈ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣದ ವಿರುದ್ಧ ಬಾಲಿವುಡ್‌ ತಾರೆಯರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿ ಫೋಸ್ಟ್ ಹಂಚಿಕೊಂಡಿದ್ದಾರೆ. ಬಾಲಿವುಡ್‌ ನಟಿ ಕರೀನಾ ಕಪೂರ್‌, 12 ವರ್ಷಗಳ ನಂತರ ಮತ್ತೇ ಅದೇ ಕಥೆ, ಅದೇ ಪ್ರತಿಭಟನೆ, ಆದರೆ ನಾವು ಮಾತ್ರ ಬದಲಾವಣೆಗಾಗಿ ಎಂದು ಬರೆದುಕೊಂಡಿದ್ದಾರೆ.

ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿರುವ ಆಲಿಯಾ ಭಟ್‌, 'ನಿರ್ಭಯಾ ದುರಂತ ಸಂಭವಿಸಿ ಒಂದು ದಶಕ ಕಳೆದಿದೆ. ಮತ್ತೊಂದು ಭೀಕರ ಅತ್ಯಾಚಾರ, ಹೆಣ್ಣಿಗೆ ಎಲ್ಲಿಯೂ ಸುರಕ್ಷತೆಯಿಲ್ಲ ಎಂದು ತೋರಿಸಿಕೊಡುವ ಮತ್ತೊಂದು ದಿನ.  ಆದರೆ ಇನ್ನೂ ಏನೂ ಬದಲಾಗಿಲ್ಲ ಎಂಬುದನ್ನು ನಮಗೆ ನೆನಪಿಸಲು ಮತ್ತೊಂದು ಭಯಾನಕ ದೌರ್ಜನ್ಯ ಎಂದಿದ್ದಾರೆ.

ನಟಿ ಪರಿಣಿತಿ ಚೋಪ್ರಾ ಕೂಡ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡು, 'ನಿಮಗೇ ಓದಲು ಕಷ್ಟವಾಗುತ್ತಿದೆ ಎಂದರೆ, ಆಕೆಗೆ ಯಾವ ಅನುಭವವಾಗಿರಬಹುದು ಎನ್ನುವುದನ್ನು ಯೋಚಿಸಿ, ಕೃತ್ಯ ಎಸಗಿದಾತನನ್ನು ಗಲ್ಲಿಗೇರಿಸಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ವಿಜಯ್‌ ವರ್ಮಾ, 'ಕೊನೆ ಪಕ್ಷ ನಮ್ಮನ್ನು ಕಾಯುವವರನ್ನಾದರೂ ರಕ್ಷಿಸಿ' ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments