Webdunia - Bharat's app for daily news and videos

Install App

ನಂಜುಡೇಶ್ವರನ ಸನ್ನಿಧಾನದಲ್ಲಿ ಧ್ಯಾನ ಮಾಡಿದ ಬಾಲಿವುಡ್‌ ನಟ ಶಿಲ್ಪಾ ಶೆಟ್ಟಿ

sampriya
ಬುಧವಾರ, 29 ಮೇ 2024 (16:10 IST)
Photo By X
ಬೆಂಗಳೂರು: ಆ್ಯಕ್ಷನ್‌ ಸ್ಟಾರ್‌ ಧ್ರುವ ಸರ್ಜಾ ಅಭಿನಯದ ಬಿಗ್‌ಬಜೆಟ್‌ನ ಚಿತ್ರದ ಕೆಡಿ ಶೂಟಿಂಗ್‌ ಕೆಲಸ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ತುಳುನಾಡಿನ ಬೆಡಗಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದು, ಶೂಟಿಂಗ್‌ಗಾಗಿ ಮೈಸೂರಿನಲ್ಲಿ ತಂಗಿದ್ದಾರೆ.

ಅರಮನೆಗಳ ನಗರಿ ಮೈಸೂರಿಗೆ ಬಂದಿರುವ ಹಿರಿಯ ನಟಿ ಶೂಟಿಂಗ್‌ ವೇಳೆ ಬಿಡುವು ಮಾಡಿಕೊಂಡು ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ  ತೆರಳಿದ್ದಾರೆ. ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದಲ್ಲಿ ಶಿಲ್ಪಾ ಶೆಟ್ಟಿ ಅವರು ಧ್ಯಾನ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಬಂದಿರುವ ವಿಷಯ ತಿಳಿದು ಅಭಿಮಾನಿಗಳು ಮುಗಿಬಿದ್ದಿದ್ದರು.

ಮಂಗಳೂರು ಮೂಲಕ ಶಿಲ್ಪಾ ಶೆಟ್ಟಿ ಅವರು ಈಚೆಗೆ ಕುಟುಂಬ ಸಮೇತರಾಗಿ ತುಳುನಾಡಿಗೆ ತೆರಳಿ ಭೂತ ಕೋಲ ವೀಕ್ಷಿಸಿದ್ದರು. ಈಗ ಅವರು ಮೈಸೂರಿನಲ್ಲಿ ನಂಜನಗೂಡು ನಂಜುಡೇಶ್ವರನ ಸನ್ನಿಧಾನಕ್ಕೆ ತೆರಳಿದ್ದಾರೆ.

ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ ಕೆಡಿ ಸಿನಿಮಾದಲ್ಲಿ  ಅವರು ಮಿಂಚುತ್ತಿದ್ದಾರೆ .ಯುಗಾದಿ ಹಬ್ಬದಂದು ಚಿತ್ರತಂಡ ಶಿಲ್ಪಾ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು.
ಶಿಲ್ಪಾ ಶೆಟ್ಟಿ ಕೂಡಾ ತಮ್ಮ ಪೋಸ್ಟರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬಹಳ ಎಕ್ಸೈಟ್‌ ಆಗಿದ್ದರು. ರೆಟ್ರೋ ಲುಕ್‌ನಲ್ಲಿ ಕಾರೊಂದರ ಮುಂದೆ ಬ್ಯಾಗ್‌ ಹಿಡಿದು ನಿಂತಿರುವ ಶಿಲ್ಪಾ ಶೆಟ್ಟಿ ಲುಕ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.  

 ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Madenur Manu: ಮಡೆನೂರು ಮನು ರೇಪ್ ಕೇಸ್: ಒಂದೇ ದಿನಕ್ಕೆ ಉಲ್ಟಾ ಹೊಡೆದ ಸಂತ್ರಸ್ತೆ ಹೇಳಿದ್ದೇನು

Darshan: ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು: ಫಾರಂಹೌಸ್ ಮೇಲೆ ರೇಡ್

Chaitra Kundapura: ತಂದೆಯ ಹತ್ಯೆಗೆ ಚೈತ್ರಾ ಕುಂದಾಪುರ ಸುಪಾರಿ: ಇದೇನಿದು ಆರೋಪ

Tamannah Bhatia: ಮೈಸೂರ್ ಸ್ಯಾಂಡಲ್ ಗೆ ತಮನ್ನಾ ಭಾಟಿಯಾ: ಕನ್ನಡ ನಟಿಯರು ಸಿಗ್ಲಿಲ್ವಾ

ಅಬ್ಬಬ್ಬಾ, ಮಗಳ ದಿಟ್ಟ ನಿರ್ಧಾರ ಕೇಳಿ ಶಾಕ್ ಆದ ಬಾಲಿವುಡ್ ನಟ, ಆಥಿಯಾ ಶೆಟ್ಟಿ ಬಗ್ಗೆ ಸುನೀಲ್ ಮೆಚ್ಚುಗೆಯ ಮಾತು

ಮುಂದಿನ ಸುದ್ದಿ
Show comments