ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

Sampriya
ಭಾನುವಾರ, 17 ಆಗಸ್ಟ್ 2025 (12:53 IST)
Photo Credit X
ಮುಂಬೈ: ವಿವಾದಾತ್ಮಕ ಯುಟ್ಯೂಬರ್ ಮತ್ತು ಒಟಿಟಿ ಹಿಂದಿ ಬಿಗ್​ ಬಾಸ್ ವಿಜೇತ ಎಲ್ವಿಶ್ ಯಾದವ್ ನಿವಾಸದ ಮೇಲೆ ಇಂದು ಬೆಳಗ್ಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಹರಿಯಾಣದ ಗುರುಗ್ರಾಮ್​ನ ಸೆಕ್ಟರ್-56ನಲ್ಲಿರುವ ಎಲ್ವಿಶ್‌ ಮನೆ ಮೇಲೆ ಬೆಳಿಗ್ಗೆ 5.30ರ ಸುಮಾರಿಗೆ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು 25-30 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಮನೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ, ಎಸ್ಕೇಪ್‌ ಆಗಿದ್ದಾರೆ. ಅದೃಷ್ಟವಶಾತ್‌ ಆ ಸಂದರ್ಭದಲ್ಲಿ ಎಲ್ವಿಶ್‌ ಮನೆಯಲ್ಲಿ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫೈರಿಂಗ್‌ ಬಳಿಕ ಇಡೀ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. 

ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಮತ್ತು ಸೋಷಿಯಲ್‌ ಮೀಡಿಯಾ ಆಕ್ಟಿವಿಟೀಸ್‌ಗಳಿಂದ ಫೇಮಸ್‌ ಆಗಿದ್ದಾರೆ. ಗುಂಡು ಹಾರಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ.  

ಎಲ್ವಿಶ್ ತಂದೆ ರಾಮಾವತಾರ್ ಯಾದವ್ ಪ್ರತಿಕ್ರಿಯಿಸಿ, ತಮ್ಮ ಮಗನಿಗೆ ಈ ಮುನ್ನ ಯಾವುದೇ ಬೆದರಿಕೆ ಬಂದಿಲ್ಲ. ಪೊಲೀಸರು ಇಲ್ಲಿದ್ದಾರೆ. ಗುಂಡು ಹಾರಿಸಿದಾಗ ನಾನು ಮಲಗಿದ್ದೆ. ಸುಮಾರು 25-30 ಗುಂಡು ಹಾರಿಸಲಾಗಿದೆ. ಸಿಸಿಟಿವಿಯಲ್ಲಿ ಬೈಕ್‌ನಲ್ಲಿ ಮೂವರು ಪುರುಷರು ಕಾಣಿಸಿಕೊಂಡಿದ್ದಾರೆ, ಆದರೆ ಇಬ್ಬರು ಗೇಟ್‌ನಲ್ಲಿ ನಿಂತು ಗುಂಡು ಹಾರಿಸುವುದು ಕಂಡಿದೆ ಎಂದು ತಿಳಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments