Select Your Language

Notifications

webdunia
webdunia
webdunia
webdunia

’ಬಿಗ್ ಬಾಸ್’ ಹ್ಯಾಪ್ ಮೋರೆ ನೋಡೋಕಾಗ್ತಿಲ್ಲ ಅಂದ್ರು ನಾಗತಿಹಳ್ಳಿ

’ಬಿಗ್ ಬಾಸ್’ ಹ್ಯಾಪ್ ಮೋರೆ ನೋಡೋಕಾಗ್ತಿಲ್ಲ ಅಂದ್ರು  ನಾಗತಿಹಳ್ಳಿ
Bangalore , ಶುಕ್ರವಾರ, 30 ಡಿಸೆಂಬರ್ 2016 (13:40 IST)
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಈಗಾಗಲೆ 75 ದಿನಗಳನ್ನು ಪೂರೈಸಿದ್ದು ಇನ್ನೇನು ಜನವರಿಯಲ್ಲಿ ಗ್ರ್ಯಾಂಡ್ ಫಿನಾಲೆಗೆ ರೆಡಿಯಾಗುತ್ತಿದೆ. ಸ್ಪರ್ಧಿಗಳ ನಡುವೆ ಒಳಜಗಳ, ಪಿತೂರಿ, ಪರಸ್ಪರ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದಿರುವುದು ಕಾಣುತ್ತಿದ್ದೇವೆ.
 
ಈ ಶೋ ಬಗ್ಗೆ ಇದೇ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸ್ಪಂದಿಸಿದ್ದಾರೆ. ಬಿಗ್ ಬಾಸ್ ಸಖತ್ ಬೋರಿಂಗ್ ಆಗಿದೆ. ಎಲ್ಲಾ ಸ್ಪರ್ಧಿಗಳು ಸುಸ್ತಾದಂತೆ ಕಾಣುತ್ತಿದ್ದಾರೆ. ಅವರಿಗೆ ಏನಾದ್ರೂ ಮಾಡಿ ಅವರ ಮುಖದಲ್ಲಿ ಒಂಚೂರು ನಗು ತನ್ನಿ ಸುದೀಪ್. ಇಲ್ಲಾ ಅಂದ್ರೆ ಆ ಹ್ಯಾಪ್ ಮೋರೆಗಳನ್ನು ನೋಡೋಕಾಗ್ತಿಲ್ಲ ಎಂದಿದ್ದಾರೆ.
 
ಬಿಗ್ ಬಾಸ್ ಸಖತ್ ಬೋರಿಂಗ್ ಕಾರ್ಯಕ್ರಮ ಅನ್ನುವುದು ಈ ಘಟನೆಯಿಂದ ಗೊತ್ತಾಗಿದೆ. ಈ ಬಗ್ಗೆ ಸುದೀಪ್ ಇನ್ನೂ ಪ್ರತಿಕ್ರಿಯಿಸಿಲ್ಲ. ಅವರು ಏನಂತಾರೋ ಏನೋ ಈ ವಾರದ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ಭಾರತದಲ್ಲೇ ದೀಪಿಕಾ ಪಡುಕೋಣೆ xXx ಸಿನಿಮಾ