Webdunia - Bharat's app for daily news and videos

Install App

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

Sampriya
ಸೋಮವಾರ, 30 ಜೂನ್ 2025 (18:32 IST)
ಬೆಂಗಳೂರು: ಸಹಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿಯಾಗಿದ್ದ ನಟ ಮಡೆನೂರು ಮನುಗೆ ಇದೀಗ ಬಿಗ್‌ ರಿಲೀಫ್ ಸಿಕ್ಕಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ, ನಟನಿಗೆ ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧವನ್ನು ಫಿಲ್ಮ್‌ ಚೇಂಬರ್‌ ತೆರವು ಮಾಡಿದೆ.

ಮನು ಅವರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ನಟರಾದ ಶಿವರಾಜ್​ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಮನು ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.

ಮಡೆನೂರು ಮನು ಅವರು ನಟರಾದ ಶಿವರಾಜ್​ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಅವರಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದು, ಆ ಪತ್ರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್‌ ಅವರಿಗೆ ನೀಡಿದ್ದಾರೆ.

ಮಡೆನೂರು ಮನು ಪತ್ರ ಸ್ವೀಕರಿಸಿದ ಉಮೇಶ್ ಬಣಕಾರ್ ಅವರು, ಈಗಾಗಲೇ ಮನು ಬಹಿರಂಗವಾಗಿ ಮೂವರು ನಟರ ಬಳಿ ಕ್ಷಮೆ ಕೇಳಿದ್ದಾರೆ. 

ಹೀಗಾಗಿ ಅವರಿಗೆ ಒಂದು ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಕನ್ನಡ ಚಿತ್ರರಂಗದ ಹೆಸರು ಕಾಪಾಡಲಿ ಎಂದು ಮನುಗೆ ಉಮೇಶ್‌ ಬಣಕಾರ್‌ ಬುದ್ಧಿವಾದ ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ಮುಂದಿನ ಸುದ್ದಿ
Show comments