Select Your Language

Notifications

webdunia
webdunia
webdunia
webdunia

ಸ್ಯಾಂಡಲ್‍ವುಡ್‌ಗೆ ತೆಲುಗು ಚಿತ್ರಗಳ ದಾಂಗುಡಿ

ಸ್ಯಾಂಡಲ್‍ವುಡ್‌ಗೆ ತೆಲುಗು ಚಿತ್ರಗಳ ದಾಂಗುಡಿ
Bangalore , ಮಂಗಳವಾರ, 10 ಜನವರಿ 2017 (10:51 IST)
ಗಾಂಧಿನಗರದ ಮುಖ್ಯ ಚಿತ್ರಮಂದಿರಗಳು ಈ ವಾರ ತೆಲುಗು ಚಿತ್ರಗಳಿಂದ ತುಂಬಿ ತುಳುಕಲಿವೆ. ಯಾಕೆಂದರೆ ಚಿರಂಜೀವಿ ಮತ್ತು ಬಾಲಕೃಷ್ಣ ಅಭಿನಯದ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುತ್ತಿದ್ದು ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗುವುದು ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.
 
ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಚಿತ್ರ ಜನವರಿ 11ಕ್ಕೆ ರಿಲೀಸ್ ಆಗ್ತಿದೆ. ಬಾಲಕೃಷ್ಣ ಅಭಿನಯದ ಐತಿಹಾಸಿಕ ಚಿತ್ರ ಗೌತಮಿಪುತ್ರ ಶಾತಕರ್ಣಿ ಜನವರಿ 12ಕ್ಕೆ ಬರುತ್ತಿದೆ. ಚಿರಂಜೀವಿ ಚಿತ್ರ ಭೂಮಿಕಾ ಚಿತ್ರಮಂದಿರದಲ್ಲಿ, ಬಾಲಕೃಷ್ಣ ಚಿತ್ರ ಸಂತೋಷ್ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತಿವೆ.
 
ಗಾಂಧಿನಗರದ ಮೂವಿಲ್ಯಾಂಡ್‌ನಲ್ಲೂ ಖೈದಿ ನಂಬರ್ 150 ಬಿಡುಗಡೆಯಾಗುತ್ತಿದೆ. ಒಂದೆರಡು ವಾರಗಳ ಕಾಲ ಕನ್ನಡ ಚಿತ್ರಗಳ ಪರಿಸ್ಥಿತಿ ಕೇಳುವಂತಿಲ್ಲ. ಹಾಗಾಗಿ ಕೆಲವು ಚಿತ್ರಗಳು ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ರೆಕ್ಸ್, ಊರ್ವಶಿ, ಮುಕುಂದ, ಸಂಧ್ಯಾ, ರೇಣುಕಾಪ್ರಸನ್ನ, ಮಾನಸ ಮುಂತಾದ ಚಿತ್ರಮಂದಿರಗಳಲ್ಲೂ ತೆಲುಗು ಚಿತ್ರಗಳು ಪ್ರದರ್ಶನ ಕಾಣಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುನಿರೀಕ್ಷೆಯ ’ಚೌಕ’ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆ