ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮನೆಗೆ ಖದೀಮರು ಕನ್ನ ಹಾಕಿದ್ದಾರೆ. ಯಾರು ಇಲ್ಲದ ಸಂದರ್ಭ ಲಗ್ಗೆರೆಯ ಪ್ರಥಮ್ ಮನೆಯ ಬಾಗಿಲು ಮೀಟಿ ನುಗ್ಗಿರುವ ಕಳ್ಲರು ಲ್ಯಾಪ್ ಟಾಪ್, ಮೊಬೈಲ್ ಮತ್ತು ನಗದು ಕದ್ದು ಪರಾರಿಯಾಗಿದ್ದಾರೆ. ಲಗ್ಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳರು ಪ್ರಥಮ್ ನಿರ್ದೇಶನ ಮಾಡುತ್ತಿದ್ದ ದೇವ್ರವ್ನೆ ಬಿಡು ಚಿತ್ರದ ಸ್ಕ್ರಿಪ್ಟ್ ಸಹ ಕದ್ದೊಯ್ದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಕುಲ್ ಬಾಲಾಜಿ ನಾಯಕ ನಟನಾಗಿ ನಟಿಸಿರುವ `ದೇವ್ರವ್ನೆ ಬುಡು’ ಚಿತ್ರವನ್ನ ಪ್ರಥಮ್ ನಿರ್ದೇಶಿಸುತ್ತಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.