Publish Date: Fri, 09 Dec 2016 (10:56 IST)
Updated Date: Fri, 09 Dec 2016 (10:58 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಮತ್ತೊಂದು ಸಿನಿಮಾ ಮಾಡಲು ಹೊರಟಿರುವ ಸಂಗತಿ ಎಲ್ಲರಿಗೂ ಗೊತ್ತು. ಅದರ ಶೀರ್ಷಿಕೆ ಮುಗುಳು ನಗೆ ಎಂದೂ ಓದಿರುತ್ತೀರಿ. ಅದರ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಲಿದೆ.
ಬೆಂಗಳೂರಿನಲ್ಲಿ ಮೊದಲ ದೃಶ್ಯಕ್ಕೆ ಚಾಲನೆ ಸಿಗಲಿದೆ. ಮುಂದಿನ ದಿನಗಳಲ್ಲಿ ಮೈಸೂರು, ಪಾಂಡಿಚೇರಿ, ಶಿರಸಿ, ಯಾಣದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಮೊದಲೇ ಭಟ್ಟರ ಸಿನಿಮಾ. ಹಾಗಾಗಿ ಮಲೆ ನಾಡಿನ ಸುಂದರ ತಾಣಗಳನ್ನು ತೋರಿಸದೇ ಇದ್ದರೆ ಅದು ಪೂರ್ಣವಾಗುವುದೇ?
ಅದುವೇ ಇಲ್ಲಿಯೂ ಮುಂದುವರಿಯುತ್ತಿದೆ. ಈ ಬಾರಿ ಇದುವರೆಗೆ ಯಾರೂ ನೋಡದ ಸುಂದರ ತಾಣಗಳನ್ನು ತೋರಿಸುವ ಉತ್ಸಾಹದಲ್ಲಿದ್ದಾರೆ ಭಟ್ಟರು. ಅಂತೂ ಮುಂದಿನ ವರ್ಷಕ್ಕೆ ಭಟ್ಟರು-ಗಣಿ ಸಿನಿಮಾ ರೆಡಿಯಾಗಿ ನಿಮ್ಮ ಮುಂದೆ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ