Select Your Language

Notifications

webdunia
webdunia
webdunia
webdunia

ರಜಿನಿಕಾಂತ್ ಒಳ್ಳೆಯ ನಟನೆಂದು ಒಪ್ಪಿಕೊಳ್ಳದ ನಿರ್ದೇಶಕ

ರಜಿನಿಕಾಂತ್ ಒಳ್ಳೆಯ ನಟನೆಂದು ಒಪ್ಪಿಕೊಳ್ಳದ ನಿರ್ದೇಶಕ
ಚೆನ್ನೈ , ಶನಿವಾರ, 15 ಏಪ್ರಿಲ್ 2017 (20:11 IST)
ಸೂಪರ್ ಸ್ಟಾರ್ ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರ ಪೈಕಿ ಒಬ್ಬರು. ಅವರ ಸ್ಟೈಲ್, ಡೈಲಾಗ್ ಡೆಲಿವರಿಗೆ ಹುಚ್ಚೆದ್ದು ಕುಣಿಯುವ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ, ಹಿರಿಯ ನಿರ್ದೇಶಕ ಭಾರತೀರಾಜ್ ಮಾತ್ರ ರಜಿನಿಕಾಂತ್ ಅವರನ್ನ ಇಂದಿಗೂ ಒಳ್ಳೆಯ ನಟನೆಂದು ಒಪ್ಪಿಕೊಂಡಿಲ್ಲವಂತೆ. ಈ ಮಾತನ್ನ ಸ್ವತಃ ರಜಿನಿಕಾಂತ್ ಹೇಳಿದ್ದಾರೆ.
ಭಾರತಿರಾಜ್ ನಿರ್ದೇಶನದ `16 ವಯಧಿನಿಲ್ಲೆ’ ಚಿತ್ರದ ಮೂಲಕವೇ ರಜಿನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ ರಜಿನಿ ನಟನೆಯನ್ನ ಭಾರತೀರಾಜ್ ಒಪ್ಪಿಕೊಂಡಿಲ್ಲವಂತೆ.

`ನಾನು ಭಾರತೀರಾಜ್ ಅವರನ್ನ ತುಂಬಾ ಇಷ್ಟಪಡುತ್ತೇನೆ. ಅವರೂ ನನ್ನನ್ನ ಇಷ್ಟಪಡುತ್ತಾರೆ.  ಹಳೆಯ ಸಂದರ್ಶನವೊಂದರಲ್ಲಿ ಪತ್ರಕರ್ತರೊಬ್ಬರು ನನ್ನ ನಟನೆ ಬಗ್ಗೆ ಕೇಳಿದಾಗ’ ‘He is a good human being’.” ಎಂದಷ್ಟೇ ಭಾರತೀರಾಜ್ ಹೇಳಿದರು. ಅವರ ಮನಸ್ಸಿನ ಮನಸ್ಸಿನ ಮಾತನ್ನ ಓದಬಲ್ಲೆ ಎಂದು ಚೆನ್ನೈನ ಭಾರತೀರಾಜ್ ಅವರ ಇಂಟರ್ ನ್ಯಾಶನಲ್ ಫಿಲ್ಮ್ ಇನ್ಸ್`ಟಿಟ್ಯೂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಜಿನಿ ಹೇಳಿದ್ದಾರೆ.. 

ಎರಡು ಬಾರಿ ಮಾತ್ರ ಭಾರತೀರಾಜ ನನ್ನ ಸಮಯ ಕೇಳಿದ್ದಾರೆ. `16 ವಯಧಿನಿಲ್ಲೆ’ ಚಿತ್ರಕ್ಕಾಗಿ ಒಮ್ಮೆ ಮತ್ತು ಈಗ ಫಿಲ್ಮ್ ಇನ್ಸ್`ಟಿಟ್ಯೂಟ್ ಉದ್ಘಾಟನೆಗೆ ಕೇಳಿದ್ದಾರೆ. ನಾನೂ ಕೂಡ ಇಲ್ಲಿ ಒಬ್ಬ ವಿದ್ಯಾರ್ಥಿ ಎಂದು ರಜಿನಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಸ್ತಿ ಆಯ್ಕೆಯೂ ವ್ಯವಹಾರವಾಗಿಬಿಟ್ಟಿದೆ: ಚಿತ್ರೋದ್ಯಮಗಳ ಕಟು ಸತ್ಯ ಬಿಚ್ಚಿಟ್ದ ಹರಿಪ್ರಿಯಾ