Webdunia - Bharat's app for daily news and videos

Install App

ನಿರೀಕ್ಷೆಯಂತೆ ‘ಬಳ್ಳಾರಿ ದರ್ಬಾರ್’ಗೆ ‘ಎ’ ಸರ್ಟಿಫಿಕೇಟ್

Webdunia
ಸೋಮವಾರ, 19 ಡಿಸೆಂಬರ್ 2016 (11:52 IST)
ಸ್ಮೈಲ್‍ಶ್ರೀನು ಮತ್ತು ಸ್ಟೈಲ್‍ವೀರೇಶ್ ಸೇರಿ ನಿರ್ಮಿಸುತ್ತಿರುವ ಚಿತ್ರ `ಬಳ್ಳಾರಿ ದರ್ಬಾರ್'. ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಬಳ್ಳಾರಿ ಸದಾ ಸುದ್ದಿಯಲ್ಲಿರುವ ಜಿಲ್ಲೆ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಸದಾ ಸುದ್ದಿಯಲ್ಲಿರುವ ಈ ಜಿಲ್ಲೆಯಲ್ಲಿ ಮೈನಿಂಗ್ ಪ್ರಮುಖ ಉದ್ಯಮ. 
 
ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿದ ಬಳ್ಳಾರಿಯಲ್ಲಿ ನಡೆದಂಥ ಒಂದಷ್ಟು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾದ ಚಿತ್ರ ‘ಬಳ್ಳಾರಿ ದರ್ಬಾರ್’. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್‍ನಿಂದ ‘ಎ’ ಪ್ರಮಾಣ ಪತ್ರ ದೊರೆತಿದೆ.  
 
ಕೆಲವೊಂದು ಕ್ರೈಂ ಘಟನೆಗಳನ್ನು ಯಥಾವತ್ತಾಗಿ ಚಿತ್ರಿಸಿರುವುದರಿಂದ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ ಎಂದು ನಿರ್ದೇಶಕ ಸ್ಮೈಲ್‍ಶ್ರೀನು ತಿಳಿಸಿದ್ದಾರೆ.  ಸದ್ಯದಲ್ಲೇ ಬಳ್ಳಾರಿ ದರ್ಬಾರ್ ರಾಜ್ಯಾದ್ಯಂತ ತೆರೆಕಾಣಲಿದೆ. 
 
ಸ್ಮೈಲ್‍ಶ್ರೀನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾನಿ ಮತ್ತು ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಚಿರಂಜೀವಿ ನೃತ್ಯ ನಿರ್ದೇಶನ, ಬಿ.ಮಲ್ಲಿ ಸಂಕಲನವಿದೆ. 
 
ಪೊಲಾ ಶ್ರೀನಿವಾಸಬಾಬು, ಸಂಪತ್‍ಕುಮಾರ್, ಶುಭಶ್ರೀ, ಆಶಿನಿ, ಮಮತರಾವುತ್, ಆಜಿಬಾಬಾಖಾನ್, ಅರುಣ್‍ಕುಮಾರ್, ಸುಭಾಷ್‍ಚಂದ್ರ, ಗಾಂಧಿರಾಮ್, ನಯನ, ಗುರುನಾಥ ಮುಂತಾದವರ ತಾರಾಬಳಗವಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

Actor Upendra: ಪತ್ನಿ ಮಕ್ಕಳೊಂದಿಗೆ ಮಂತ್ರಾಲಯಕ್ಕೆ ತೆರಳಿದ ಉಪೇಂದ್ರ, ರಥ ಎಳೆದು ಹರಕೆ ತೀರಿಸಿದ ರಿಯಲ್ ಸ್ಟಾರ್‌

Actor Vishal: ವೇದಿಕೆಯಲ್ಲಿ ಮಂಗಳಮುಖಿಯರು ಹರಸುತ್ತಿರುವಾಗಲೇ ನಟ ವಿಶಾಲ್‌ಗೆ ಹೀಗಾಗುದ, Video Viral

Actor Vishal: ವೇದಿಕೆಯಲ್ಲಿ ಕುಸಿದು ಬಿದ್ದ ನಟ ವಿಶಾಲ್

Rakesh Poojari: ರಾಕೇಶ್ ಪೂಜಾರಿ ಸಾವು ಕಾಂತಾರ ಸಿನಿಮಾ ಮೇಲೆ ಅಪವಾದ

ಮುಂದಿನ ಸುದ್ದಿ
Show comments