ಮತ್ತೆ ಮಾತಿನಿಂದ ವಿವಾದಕ್ಕೀಡಾದ ಜಗ್ಗೇಶ್: ಬಿಸಿ ಪಾಟೀಲ್ ಜೊತೆಗೆ ಟ್ವೀಟ್ ನಲ್ಲೇ ಚರ್ಚೆ

Webdunia
ಗುರುವಾರ, 1 ಏಪ್ರಿಲ್ 2021 (11:21 IST)
ಬೆಂಗಳೂರು: ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಯಾಕೋ ವಿವಾದಗಳಿಂದಲೇ ಸುದ್ದಿಯಾಗುತ್ತಿರುವುದು  ವಿಪರ್ಯಾಸ. ಮೊನ್ನೆಯಷ್ಟೇ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದ ಜಗ್ಗೇಶ್ ಈಗ ತಮ್ಮದೇ ಪಕ್ಷದ ನಾಯಕ, ನಟ ಬಿಸಿ ಪಾಟೀಲ್ ಜೊತೆಗೆ ಟ್ವಿಟರ್ ನಲ್ಲೇ ಚರ್ಚೆ ನಡೆಸಿದ್ದಾರೆ.


ಜಗ್ಗೇಶ್ ಮೊನ್ನೆಯಷ್ಟೇ, ‘ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಿನಿಮಾ ನೋಡಬೇಡಿ’ ಎಂದು ಹೇಳಿಕೆ ನೀಡಿದ್ದರು. ಇದು ಬಿಸಿ ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ. ‘ಜಗ್ಗೇಶ್ ಅವರೇ ಇಂತಹ ನಿರುತ್ಸಾಹಗೊಳಿಸುವ ಮಾತನಾಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ ಬೆಳೆದವನಾಗಿರುವುದರಿಂದ ಈ ಮಾತು ಹೇಳುತ್ತಿದ್ದೇನೆ. ನಮ್ಮ, ನಿಮ್ಮ ಮಕ್ಕಳು ಸಹ ಚಿತ್ರರಂಗಕ್ಕೆ ಬರಬೇಕು. ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಬೇಕು’ ಎಂದು ಸರಣಿ ಟ್ವೀಟ್ ಮಾಡಿ ಬಿಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಇದಕ್ಕೆ ಉತ್ತರಿಸಿರುವ ಜಗ್ಗೇಶ್, ‘ನನ್ನ ಮಾತನ್ನು ಸರಿಯಾಗಿ ಅರ್ಥೈಸಿಲ್ಲ. ನಾನು ವಕ್ತಾರನಾಗಿ ಹಿರಿಯ ಶಾಸಕರ ಸಭೆಯಲ್ಲಿ ಮಾತನಾಡಿದ್ದು ನಿಮಗೆ ಅಪಾರ್ಥವಾಗಿ ಕಾಣಿಸಿದ್ದು ಹೇಗೆ ನಾಕಾಣೆ. ಒಳ್ಳೆಯ ಮಾತು ಅಪಾರ್ಥ  ಮಾಡಿದರೆ ಉತ್ತಮ ಸಮಾಜ ಮೌನವಾಗಿ ಆತ್ಮದಲ್ಲೇ ಉಳಿಯುತ್ತದೆ.  ನಾ ಹೇಳಿದ್ದು ಕಲೆಯನ್ನು 2 ಗಂಟೆ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ತಂದೆ-ತಾಯಿ, ಸಮಾಜಕ್ಕೆ ಉತ್ತಮ ನಾಯಕರಾಗಿ. ಸಿನಿಮಾ ನಾಯಕರು ನನ್ನ ಸೇರಿ ನಿಮ್ಮ ರಂಜಿಸುವವರು ಮಾತ್ರ ಎಂದು ನಾನು ಹೇಳಿದ್ದು’ ಎಂದು ಸಮರ್ಥನೆ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments