Daily Horoscope
✕

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

ಕೃಷ್ಣವೇಣಿ ಕೆ
ಮಂಗಳವಾರ, 29 ಸೆಪ್ಟಂಬರ್ 2026 (10:43 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ನಿಯಮ ಮುರಿದ ಮೇಲೂ ಯಶಸ್ ಉದ್ಧಟತನದಿಂದ ವರ್ತಿಸಿದ್ದಕ್ಕೆ ಯಶಸ್ ಗೆ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.
 

ಕಳೆದ ವಾರವಷ್ಟೇ ಕಿಚ್ಚ ಸುದೀಪ್ ಮನೆಯ ಮೂಲ ನಿಯಮಗಳನ್ನು ಮುರಿದರೆ ಮುಂದಿನ ಸಾರಿ ಡೈರೆಕ್ಟ್ ಆಗಿ ಬಾಗಿಲು ಓಪನ್ ಆಗುತ್ತೆ, ಮನೆಗೆ ಕಳುಹಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಆಗ ಎಲ್ಲಾ ಸದಸ್ಯರೂ ಓಕೆ ಎಂದು ತಲೆ ಅಲ್ಲಾಡಿಸಿದ್ದರು.
 
ಆದರೆ ನಿನ್ನೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಅರ್ಹರಲ್ಲದ ಸ್ಪರ್ಧಿ ಎಂದು ಫ್ಲೈಟ್ ಗೆ ಕಳುಹಿಸಿದ್ದ ಯಶಸ್ ಲಿವಿಂಗ್ ರೂಂನಲ್ಲಿ ಸೋಫಾ ಮೇಲೆ ಕೂರಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರೂ ಸೋಫಾ ಮೇಲೆ ಕುಳಿತು ನಿಯಮ ಉಲ್ಲಂಘಿಸಿದ್ದಾರೆ. ಅವರನ್ನು ನೋಡಿಕೊಳ್ಳಲು ಉಸ್ತುವಾರಿಯಾಗಿ ಸೌಂದರ್ಯರನ್ನು ನಿಯೋಜಿಸಲಾಗಿತ್ತು. ಜೊತೆಗೆ ಯಶಸ್ ಜೊತೆ ಮಂಜ ಕೂಡಾ ಸೋಫಾ ಮೇಲೆ ಕೂತಿದ್ದರು. ಇದೆಲ್ಲಾ ಕಾರಣಕ್ಕೆ ಮನೆಗೆ ನೀಡಿದ್ದ ಮೊಟ್ಟೆಯ ಅರ್ಧದಷ್ಟು ಮೊಟ್ಟೆಯನ್ನು ಬಿಗ್ ಬಾಸ್ ವಾಪಸ್ ಪಡೆಯುವ ಶಿಕ್ಷೆ ನೀಡಿತ್ತು.
 
ಈ ವೇಳೆ ತಾವು ತಪ್ಪು ಮಾಡಿದ್ದರೂ ನಾನು ನಿಯಮ ಬ್ರೇಕ್ ಮಾಡ್ತೇನೆ, ಮನೆಯವರಿಗೆಲ್ಲರಿಗೂ ಶಿಕ್ಷೆಯಾಗಲಿ, ಮೊಟ್ಟೆ ಮಾತ್ರವಲ್ಲ, ಹಣ್ಣೂ ಕಿತ್ತುಕೊಳ್ಳಲಿ, ಮನೆಯವರಿಗೆ ರೇಷನ್ ಕೂಡಾ ಸಿಗದ ಹಾಗೆ ಮಾಡ್ತೀನಿ ಎಂದು ಉದ್ಧಟತನದಿಂದ ಕೂಗಾಡಿದ್ದಾರೆ. ಅವರ ಈ ವರ್ತನೆಗೆ ಪ್ರೇಕ್ಷಕರೂ ಛೀಮಾರಿ ಹಾಕಿದ್ದಾರೆ. ನಿಯಮ ಮುರಿದ ಮೇಲೂ ಇಂತಹ ವರ್ತನೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ. ನನ್ನದು ಕಿತ್ಕೊಂಡ್ರೆ ಮನೆಯವರದ್ದೂ ಹೋಗುವ ಹಾಗೆ ಮಾಡ್ತೀನಿ ಎನ್ನುವುದು ಎಂಥಾ ಮನಸ್ಥಿತಿ ಎಂದಿದ್ದಾರೆ. ಈ ವಾರಂತ್ಯಕ್ಕೆ ಕಿಚ್ಚ ಯಾವ ಶಿಕ್ಷೆ ನೀಡುತ್ತಾರೆ ನೋಡಬೇಕಿದೆ.

Related News

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments