ಬಿಗ್ ಬಾಸ್ ಗೆದ್ದರೇನು, ಬಯಲಲ್ಲೇ ಮಲಗಿದ ಹನುಮಂತ: Video

Krishnaveni K
ಗುರುವಾರ, 30 ಜನವರಿ 2025 (10:59 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವಿಜೇತರಾಗಿದ್ದ ಹಳ್ಳಿ ಹೈದ ಹನುಮಂತ ಟ್ರೋಫಿ ಗೆದ್ದರೂ ತನ್ನ ಮೂಲ ಮರೆತಿಲ್ಲ. ಬಯಲಲ್ಲೇ ಮಲಗಿ ರಾತ್ರಿ ಕಳೆದ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಇತ್ತೀಚೆಗೆ ಮುಕ್ತಾಯವಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ದೊಡ್ಮನೆ ಪ್ರವೇಶಿಸಿದ್ದ ಹನುಮಂತ ಆ ಮನೆಯ ವೈಭೋಗ ಕಂಡು ಅಚ್ಚರಿಗೊಂಡಿದ್ದರು. ತಮ್ಮ ಮುಗ್ಧ ವರ್ತನೆಯಿಂದಲೇ ಜನರ ಪ್ರೀತಿ ಗಳಿಸಿದ್ದರು.

ಕೊನೆಗೆ ಫೈನಲ್ ನಲ್ಲಿ ಹನುಮಂತ ವಿನ್ನರ್ ಆಗಿದ್ದರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದರು. ಫೈನಲ್ ಗೆದ್ದ ಹನುಮಂತ ಟ್ರೋಫಿ ಜೊತೆಗೆ 50 ಲಕ್ಷ ರೂ. ಬಹುಮಾನವನ್ನೂ ಗೆದ್ದುಕೊಂಡಿದ್ದರು. ಇಷ್ಟು ದೊಡ್ಡ ಮೊತ್ತ ಗಳಿಸಿದರೂ ಅವರ ವಿನಯತೆ ಹಾಗೇ ಇದೆ ಎನ್ನುವುದು ಸ್ಪಷ್ಟವಾಗಿದೆ.

ಬಿಗ್ ಬಾಸ್ ಗೆದ್ದ ಬಳಿಕ ಹನುಮಂತ ತಮ್ಮ ಪೋಷಕರೊಂದಿಗೆ ಹಾವೇರಿಯ ತನ್ನ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಸನ್ಮಾನಗಳೆಲ್ಲಾ ಸ್ವೀಕರಿಸಿದ ಬಳಿಕ ಹನುಮಂತ ತಮ್ಮ ಎಂದಿನ ಜೀವನ ಶೈಲಿಗೆ ಮರಳಿದ್ದಾರೆ. ತನ್ನ ಗ್ರಾಮದಲ್ಲಿ ಹೊಲದಲ್ಲಿ ಮಲಗಿ ರಾತ್ರಿ ಕಳೆದ ಫೋಟೋ ವೈರಲ್ ಆಗಿದೆ.


 
 
 
 
 
 
 
 
 
 
 
 
 
 
 

A post shared by Cini Journey (@cini_journey)

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments