Publish Date: Tue, 07 Mar 2017 (12:43 IST)
Updated Date: Tue, 07 Mar 2017 (12:46 IST)
ಮೆಜೆಸ್ಟಿಕ್ ಟೂರಿಂಗ್ ಟಾಕೀಸ್ ಆನಂದ್ ಅವರ ನಿರ್ಮಾಣದ ಚಿತ್ರ `ಬೆಂಗಳೂರು ಅಂಡರ್ವರ್ಲ್ಡ್’ ಕನ್ನಡದಲ್ಲಿ `ಮೆಜೆಸ್ಟಿಕ್’ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಎನ್ ಸತ್ಯ ಅವರ ಬಹು ನಿರೀಕ್ಷಿತ ಚಿತ್ರ ಈ ವಾರ ತೆರೆ ಕಾಣುತ್ತಿದೆ.
ನೆಚ್ಚಿನ ಸ್ನೇಹಿತ ಆದಿತ್ಯ ಅಭಿನಯದ ಈ ಚಿತ್ರವನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ. ಅಂದು ದರ್ಶನ್ ಅವರಿಗೆ `ಮೆಜೆಸ್ಟಿಕ್’ ಯಶಸ್ಸಿನ ಮೆಟ್ಟಿಲಾದ ಹಾಗೆ ಇಂದು ಆದಿತ್ಯ ಅವರಿಗೆ ಅದೇ ನಿರ್ದೇಶಕ ಪಿ ಎನ್ ಸತ್ಯ ಅವರಿಂದ ಆಗಲಿದೆ ಎಂಬ ನಿರೀಕ್ಷೆ ಇದೆ.
ಬೆಂಗಳೂರು ನಗರ ಒಂದು ಕಾಲದಲ್ಲಿ ಭೂಗತ ಲೋಕಕ್ಕೆ ಬಹಳ ಹೆಸರುವಾಸಿ ಸಹ ಆಗಿತ್ತು. ಅಂದಿನ ಪುಟಗಳನ್ನು ಪಿ ಎನ್ ಸತ್ಯ ತೆರೆಯುತ್ತಿದ್ದಾರೆ. ಇವರಿಗೆ ಅನೇಕ ಪತ್ರಿಕೆಗಳಲ್ಲಿ ಬಂದ ವರದಿಗಳು ಸಹಕಾರಿಯಾಗಿದೆ. ಭೂಗತ ಲೋಕವನ್ನು ಮೆಟ್ಟಿ ನಿಂತಾಗ ಏನಾಗಬಹುದು ಎಂಬುದು ಸಹ ಇಲ್ಲಿ ಹೇಳಲಾಗಿದೆ.
ನಾಯಕಿಯಾಗಿ ಮೈಸೂರಿನ ಪಾಯಲ್ ರಾಧಾಕೃಷ್ಣ ಮಾಡೆಲ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಆಗಮಿಸಿದ್ದಾರೆ. ಶೋಭರಾಜ್, ಕೋಟೆ ಪ್ರಭಾಕರ್, ಹರೀಶ್ ರಾಯ್, ಉದಯ್, ಡೇನಿಯಲ್ ಬಾಲಾಜಿ ಪಾತ್ರವರ್ಗದಲ್ಲಿ ಇದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ, ಆರ್ಯವರ್ಧನ ಅವರ ಛಾಯಾಗ್ರಹಣ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.