ರೋಚಕ ಘಟ್ಟದಲ್ಲಿ ಜಾಮೀನು ಅರ್ಜಿ ವಿಚಾರಣೆ, ಈ ಒಂದು ಪಾಯಿಂಟ್‌ನಿಂದ ದರ್ಶನ್‌ಗೆ ಇಂದು ಸಿಗುತ್ತಾ ಬೇಲ್

Sampriya
ಗುರುವಾರ, 10 ಅಕ್ಟೋಬರ್ 2024 (15:01 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ರೋಚಕ ಘಟ್ಟಕ್ಕೆ ತಲುಪಿದ್ದು, ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿ ದಾಸ ಇದ್ದಾರೆ. ದರ್ಶನ್ ಪರ ವಕೀಲ ಟವರ್ ಲೊಕೇಶನ್ ಬಗ್ಗೆ ಕೋರ್ಟ್‌ನಲ್ಲಿ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.

ವಕೀಲ ನಾಗೇಶ್ ಅವರು ಮಂಡಿಸಿದ ವಾದ ದರ್ಶನ್‌ಗೆ ವರವಾಗುತ್ತಾ ಎಂದು ದಿನದ ಅಂತ್ಯದವರೆಗೆ ಕಾದು ನೋಡಬೇಕಿದೆ.

57ನೇ ಸಿಸಿಎಚ್‌ ಕೋರ್ಟ್‌ನಲ್ಲಿ  ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವಾದ ಪ್ರತಿವಾದ ನಡೆಯುತ್ತಿದೆ. ಇನ್ನೂ ಬೇಲ್ ನಿರೀಕ್ಷೆಯಲ್ಲಿರುವ ದರ್ಶನ್ ಅವರಿಗೆ ಇಂದಿನ ಸಿವಿ ನಾಗೇಶ್ ವಾದ ತುಂಬಾನೇ ಪ್ರಮುಖವಾಗಿದೆ.

ಸರ್ಕಾರಿ ವಕೀಲ ಪ್ರಸನ್ನ ಕುಮಾರ್‌ ಕೌಂಟರ್‌ಗೆ ಇಂದು ನಾಗೇಶ್ ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನ ಎಲ್ಲ ಆರೋಪಿಗಳು ಹಾಗೂ ಸಾಕ್ಷಿಗಳ ಟವರ್ ಲೊಕೇಶನ್ ಒಂದೇ ಕಡೆಯಲ್ಲಿ ತೋರಿಸಿದೆ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ಇದಕ್ಕೆ ಇಂದು ಪ್ರತಿಕ್ರಿಯಿಸಿದ ನಾಗೇಶ್, ಎಸ್‌ಪಿಪಿ ಪ್ರಸನ್ನ ಅವರನ್ನು ತನಿಖಾಧಿಕಾರಿಗಳು ತಪ್ಪು ದಾರಿಗರೆಳೆದಿದ್ದಾರೆ. ಜೂನ್ 9ರಂದು ಗೂಗಲ್ ಅಡ್ರೆಸ್, ಟವರ್ ಲೊಕೇಷನ್, ಗೂಗಲ್ ಮ್ಯಾಪ್‌ ಆಧರಿಸಿದ ದಾಖಲೆ ಸಲ್ಲಿಕೆಯಾಗಿದೆ. ಆದರೆ ಇದೇ ತಂತ್ರಜ್ಞಾನವನ್ನು ಆಧರಿಸಿ ಬೇರೆಡೆ ಇದ್ದರೆಂದು ತೋರಿಸಬಹುದು. ನಾನು ಇಲ್ಲಿ ನಿನ್ನೆ ಕುಳಿತಿದ್ದೆ. ಆದರೆ ಹೈಕೋರ್ಟ್‌ನಲ್ಲಿ ಕುಳಿತಿರುವಂತೆ ತೋರಿಸಬಹುದು. ಟವರ್ ಲೊಕೇಷನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ ಎಂದು ನಾಗೇಶ್ ಹೇಳಿದ್ದಾರೆ.

ಒಟ್ಟಾರೆ ದರ್ಶನ್ ಜಾಮೀನು ಅರ್ಜಿ ವಾಚರಣೆ ರೋಚಕ ಘಟ್ಟಕ್ಕೆ ತಲುಪಿದ್ದು, ದರ್ಶನ್ ಅವರು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಮಾನ್ಯರಂತೆ ಕೇದಾರನಾಥ ಕ್ಷೇತ್ರಕ್ಕೆ ಚಾರಣ ಮಾಡಿ ಅನುಭವಿ ಹಂಚಿಕೊಂಡ ನಟ ಯುವ ರಾಜಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್‌ಗೆ ಮಾತೃವಿಯೋಗ

ಬಾಬಿ ಜತೆಗಿನ ಪ್ರೀತಿ ಜೀವನದ ಅದ್ಭುತ ಘಳಿಗೆ: ಹಳೆ ಪ್ರೇಮಿ ಬಗ್ಗೆ ಪೂಜಾ ಭಟ್

ಸನಾತನ ಧರ್ಮವೇ ಜೀವನ ವಿಧಾನ: ಉದಯನಿಧಿ ಸ್ಟಾಲಿನ್ ವಿರುದ್ಧ ಸಿಡಿದೆದ್ದ ನಟ ಅರ್ಜುನ್ ಸರ್ಜಾ

ಬಾಲಿವುಡ್ ನಟ ನಟಿಯರ ಜತೆ ಉತ್ತಮ ಒಡನಾಟ ಹೊಂದಿದ್ದ ಕರಣ್ ಜೋಹರ್‌ ಹೀಗ್ಯಾಕೆ ನಡ್ಕೊಂಡ್ರು

ಮುಂದಿನ ಸುದ್ದಿ
Show comments