Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಬರಲಿದೆ ಬಾಹುಬಲಿ ಸಿನಿಮಾ!

ಕನ್ನಡದಲ್ಲಿ ಬರಲಿದೆ ಬಾಹುಬಲಿ ಸಿನಿಮಾ!
Bangalore , ಶುಕ್ರವಾರ, 9 ಡಿಸೆಂಬರ್ 2016 (09:07 IST)
ಬೆಂಗಳೂರು: ಅರೇ ರಾಜಮೌಳಿ ನಿರ್ದೇಶನದ ಬಾಹುಬಲಿ ಕನ್ನಡದಲ್ಲಿ ಬರುತ್ತಾ? ಕನ್ನಡಕ್ಕೆ ಡಬ್ಬಿಂಗ್ ಮಾಡಲು ಚಿತ್ರರಂಗದವರು ಒಪ್ಪಿಕೊಂಡರಾ ಅಂತ ಕೇಳಿದರೆ ದೇವರಾಣೆ ಇಲ್ಲ. ಬಾಹುಬಲಿ ಎನ್ನುವ ನಿರ್ದೇಶಕರೊಬ್ಬರು ಹೊಸ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ಈ ಒಕ್ಕಣೆ.

ನನ್ ಮಗಳೇ ಹೀರೋಯಿನ್ ಎನ್ನುವ ಕ್ಯಾಚಿ ಟೈಟಲ್ ಇಟ್ಟುಕೊಂಡು ಸಿನಿಮಾ ಮೂಡಿ ಬರುತ್ತಿದೆ. ಇದರ ನಿರ್ದೇಶಕರ ಹೆಸರು ಬಾಹುಬಲಿ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇದರಲ್ಲಿ ನಾಯಕರು. ಇನ್ನೊಂದು ಪ್ರಮುಖ ಆಕರ್ಷಣೆ ಬಿ.ಸಿ. ಪಾಟೀಲ್.

ಈ ಚಿತ್ರದ ಮುಹೂರ್ತ ಇಂದು ಬಸವನಗುಡಿ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಇದೊಂದು ಪಕ್ಕಾ ಕಾಮೆಡಿ ಸಿನಿಮಾ ಎಂದು ಟೈಟಲ್ ಹೇಳುತ್ತಿದೆ. ಅಂತೂ ಸದಾ ವಿಭಿನ್ನ ಪಾತ್ರಗಳನ್ನು ಮಾಡುವ ವಿಜಯ್ ಇಲ್ಲೊಂದು ಕಾಮಿಡಿ ಪಾತ್ರ ಮಾಡಲು ಹೊರಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಪತ್ನಿ ಪರಿಮಳಾ ಬ್ಯಾಂಕ್ ಅಕೌಂಟ್ ಗೆ ಕನ್ನ?!