ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್ ಚಿತ್ರ ಬಾಹುಬಲಿ 2. ಈ ಚಿತ್ರದ ಬಜೆಟ್, ಕಥೆ, ನಿರ್ಮಾಣದ ಪರವಾಗಿ ಎಲ್ಲರ ಗಮನಸೆಳೆದಿದ್ದು, ಈಗ ತಮಿಳು ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿರುವುದು ಚರ್ಚಾಸ್ಪದ ವಿಷಯವಾಗಿದೆ.
ಥಿಯೇಟರ್ ರಿಲೀಸ್ ಹಕ್ಕುಗಳನ್ನು ಶ್ರೀಗ್ರೀನ್ ಪ್ರೊಡಕ್ಷನ್ಸ್ ಹೌಸ್ ಪಡೆದುಕೊಂಡಿದೆ. ವಿಶೇಷ ಎಂದರೆ ರಜನಿಕಾಂತ್ ಸಿನಿಮಾಗಳಿಗೆ ನೀಡುವ ಮೊತ್ತಕ್ಕಿಂತ ಕೇವಲ ಸ್ವಲ್ಪ ವ್ಯತ್ಯಾಸ ಇದೆ ಎನ್ನುತ್ತಿವೆ ಕೋಲಿವುಡ್ ಮೂಲಗಳು. ಆದರೆ ತಮಿಳಿನ ಟಾಪ್ ಹೀರೋಗಳ ಚಿತ್ರಗಳಿಗಿಂಗ ಹೆಚ್ಚೆನ್ನಲಾಗಿದೆ.
ಇನ್ನು ಬಾಹುಬಲಿ 2 ಚಿತ್ರದ ಟಿವಿ ರೈಟ್ಸ್ ಸೋನಿ ನೆಟ್ವರ್ಕ್ ಪಾಲಾಗಿದೆ. ಇದಕ್ಕಾಗಿ ನಿರ್ಮಾಪಕರಿಗೆ ರೂ.51 ಕೋಟಿ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಡಬ್ಬಿಂಗ್ ಚಿತ್ರಕ್ಕೆ ಇಷ್ಟೆಲ್ಲಾ ಹಣ ಕೊಟ್ಟು ರೈಟ್ಸ್ ಪಡೆದಿರುವುದು ದಾಖಲೆ ಎನ್ನಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಾಹುಬಲಿ 2 ಚಿತ್ರ ತೆರೆಗೆ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.