ಬದ್ರಿ v/s ಮಧುಮತಿ ಸಿನಿಮಾದಲ್ಲಿ ‘ಮನೆದೇವ್ರು’ ಜಯರಾಮನ ಹೊಸ ಅವತಾರ

Webdunia
ಶನಿವಾರ, 9 ಮಾರ್ಚ್ 2019 (09:11 IST)
ಬೆಂಗಳೂರು: ಕಿರುತೆರೆಯಲ್ಲಿ ಮಿಂಚಿದವರು ಹಿರಿತೆರೆಗೆ ಕಾಲಿಡುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಇದೀಗ ಕಿರುತೆರೆಯಲ್ಲಿ ವಿಲನ್ ಆಗಿ ಮಿಂಚಿದ ನಟ ರವಿಕುಮಾರ್ ಕಿರುತೆರೆಯಲ್ಲಿ ಹೊಸ ಅವತಾರದಲ್ಲಿ ಬರುತ್ತಿದ್ದಾರೆ.


ಕಲರ್ಸ್ ಕನ್ನಡ ಚಾನೆಲ್ ನಲ್ಲಿ ‘ಮನೆದೇವ್ರು’ ಎಂಬ ಧಾರವಾಹಿ ನೋಡಿದ್ದರೆ ಅದರಲ್ಲಿ ಮುಖ್ಯ ಖಳನಾಯಕನ ಪಾತ್ರ ಮಾಡಿದ್ದ ಜಯರಾಮ್ ಪಾತ್ರಧಾರಿ ಬಗ್ಗೆ ನಿಮಗೆ ಗೊತ್ತಿರಬೇಕು. ಅದೇ ದಪ್ಪ ಮೀಸೆಯ ಜಯರಾಮ್ ಅಲಿಯಾಸ್ ರವಿಕುಮಾರ್ ಈಗಾಗಲೇ ರಾಜಾ ರಾಣಿ, ಜೀ ಕನ್ನಡದ ನಿಗೂಢ ರಾತ್ರಿ,  ಸುವರ್ಣ ವಾಹಿನಿಯ ‘ನೀಲಿ’ ಧಾರವಾಹಿಯಲ್ಲಿ ನಟಿಸಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಇದೀಗ ಜೀ ಕನ್ನಡದ ಗಟ್ಟಿಮೇಳದಲ್ಲೂ ಪಾತ್ರ ನಿರ್ವಹಿಸಲಿದ್ದಾರೆ.

ಅವರು ಈಗ ‘ಬದ್ರಿ ವರ್ಸಸ್ ಮಧುಮತಿ’ ಎನ್ನುವ ಹೊಸಬರ ಸಿನಿಮಾವೊಂದರಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಅಡಿಯೋ ರಿಲೀಸ್ ಮೊನ್ನೆಯಷ್ಟೇ ನಡೆದಿದೆ. ಈ ಸಿನಿಮಾದ ಹಾಡು, ಟ್ರೈಲರ್ ಈಗಾಗಲೇ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ.

ಪ್ರತಾಪವನ್ ಚಿತ್ರದ ನಿರ್ಮಾಪಕರು ಮತ್ತು ನಾಯಕರು. ಒಬ್ಬ ಸೈನಿಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಫೈಟ್, ರೊಮ್ಯಾನ್ಸ್, ಕಾಮೆಡಿ ಎಲ್ಲವೂ ಈ ಸಿನಿಮಾದಲ್ಲಿದೆ. ಆಕಾಂಕ್ಷಾ ಗಾಂಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬದ್ರಿ ವರ್ಸಸ್ ಮಧುಮತಿ ಸಿನಿಮಾ ಮುಂಬರುವ ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments