ಬಾಹುಬಲಿ-2 ಟ್ರೇಲರ್ ರಿಲೀಸ್

ಗುರುವಾರ, 16 ಮಾರ್ಚ್ 2017 (09:51 IST)
ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೆಲರ್ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಚಿತ್ರದ ಟ್ರೇಲರ್ ಆಂಧ್ರ ಮತ್ತು ತೆಲಂಗಾಣದ 300ಕ್ಕೂ ಅಧಿಕ ಥಿಯೇಟರ್`ಗಳಲ್ಲಿ ರಿಲೀಸ್ ಆಗಿದ್ದು, ಅದಕ್ಕೂ ಮುನ್ನವೇ ಆನ್`ಲೈನ್`ನಲ್ಲಿ ಹಿಂದಿ ಟ್ರೇಲರ್  ಫೇಸ್ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್`ನಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಹರಡಿತ್ತು.

ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದೇಕೆ ಎಂಬ ಕುತೂಹಲವಿರುವ ಈ ಚಿತ್ರ ವಿಶ್ವಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಟ್ರೇಲರ್`ನಲ್ಲಿ ಈ ಪ್ರಶ್ನೆಗೆ ಸಂಬಂಧಿಸಿದ ವಿಷಯಗಳೂ ಬಂದುಹೋಗುತ್ತವೆ. ನೀನು ನನ್ನ ಜೊತೆಗಿರುವಾಗ ನನ್ನನ್ನ ಕೊಲ್ಲುವವರೂ ಇನ್ನೂ ಹುಟ್ಟಿಲ್ಲ ಮಾಮ  ಎಂದು ಬಾಹುಬಲಿ ಹೇಳುವ ಮಾತು ಚಿತ್ರದ ಕುತೂಹಲವನ್ನ ಮತ್ತಷ್ಟು ಕೆರಳಿಸುತ್ತದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿಗೆ ರಮ್ಯಾ..?