Webdunia - Bharat's app for daily news and videos

Install App

ಅವಂತಿಕಾ ಶೆಟ್ಟಿಗೆ ಒಲಿದ ರಾಜರಥದ ಅದೃಷ್ಟ

Webdunia
ಬುಧವಾರ, 13 ಜುಲೈ 2016 (09:37 IST)
ರಂಗಿತರಂಗ ಸಿನಿಮಾ ತಂಡ ಬಹುದಿನಗಳಿಂದ ಅಭಿಮಾನಿಗಳಿಗೆ ಕಾದಿರಿಸಿದ್ದ ಕುತೂಹಲಕ್ಕೆ ಮೊನ್ನೆ ತಾವೇ ತೆರೆ ಎಳೆದಿದೆ. ತಮ್ಮ ಮುಂದಿನ ಸಿನಿಮಾ ರಾಜರಥ ಅನ್ನೋದನ್ನು ಮೊನ್ನೆ ತಾನೇ ನಿರ್ದೇಶಕ ಅನೂಪ್ ಭಂಡಾರಿ ಅವರು ರಿವೀಲ್ ಮಾಡಿದ್ರು. ಇದ್ರ ಜೊತೆಗೆ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ.

ಹೌದು... ರಂಗಿತರಂಗ ಸಿನಿಮಾದಲ್ಲಿ ತನ್ನದಲ್ಲ ತಪ್ಪಿಗೆ ನಾಯಕನ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅವಂತಿಕಾ ಶೆಟ್ಟಿ ಅವರನ್ನು ಮತ್ತೆ ಯಾವ ಸಿನಿಮಾದಲ್ಲಿ ನೋಡುತ್ತೇವೆ ಅಂತಾ ಅಭಿಮಾನಿಗಳನ್ನು ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೂ ಒಂದು ಅರ್ಥ ನೀಡಿದ್ದಾರೆ ಅನೂಪ್. ತಮ್ಮ ಮುಂದಿನ ಸಿನಿಮಾದಲ್ಲೂ ಅವಂತಿಕಾ ಶೆಟ್ಟಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ಇನ್ನು ನಿರೂಪ್ ಅವರು ತಮ್ಮ ಮುಂದಿನ ಸಿನಿಮಾದಲ್ಲೂ ನಾಯಕನಾಗಿ ಇರುತ್ತಾರೆ ಅಂತಾ ಅನೂಪ್ ಈ ಹಿಂದೆಯೇ ಹೇಳಿದ್ದರು.
 
ರಂಗಿತರಂಗದ ಬಳಿಕ ಅವಂತಿಕಾ ಅವರಿಗೆ ಕನ್ನಡದಲ್ಲಿ ಉತ್ತಮ ಅವಕಾಶಗಳು ಸಿಕ್ಕಿವೆ.ಇದೇ ವಾರ ಅವಂತಿಕಾ ಶೆಟ್ಟಿ ಹಾಗೂ ಉಪೇಂದ್ರ ಅಭಿನಯದ `ಕಲ್ಪನಾ 2' ಚಿತ್ರ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಗುರುನಂದನ್ ಅಭಿನಯದ ಹೆಸರಿಡದ ಚಿತ್ರದಲ್ಲೂ ಆವಂತಿಕಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. 
 
ಆ ಚಿತ್ರದ ಚಿತ್ರೀಕರಣ ಈಗಷ್ಟೇ ಶುರುವಾಗಿದೆ. ಅಷ್ಟರಲ್ಲೇ `ರಾಜರಥ` ಏರುವುದಕ್ಕೆ ಆವಂತಿಕಾ ಸಜ್ಜಾಗಿದ್ದಾರೆ. ಜುಲೈ 12 ಚಿತ್ರದ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments