Webdunia - Bharat's app for daily news and videos

Install App

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಿಂದಿ ರಿಮೇಕ್ ನಲ್ಲಿ ಬಿಗ್ ಬಿ ಅಭಿನಯಿಸ್ತಾರಾ?

Webdunia
ಬುಧವಾರ, 13 ಜುಲೈ 2016 (09:36 IST)
ನಿನ್ನೆಯಷ್ಟೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ ಅಂತಾ ನಾವು ಹೇಳಿದ್ದೆವು. ಅಲ್ಲದೇ ಸಿನಿಮಾದಲ್ಲಿ ಶಾಹೀದ್ ಕಪೂರ್ ರಕ್ಷಿತ್ ಶೆಟ್ಟಿ ಅವರು ನಿರ್ವಹಿಸಿದ ಪಾತ್ರವನ್ನು ಮಾಡುತ್ತಾರೆ. ಹಾಗೇ ಅನಂತ್ ನಾಗ್ ಅವರು ನಿರ್ವಹಿಸಿದ ಪಾತ್ರವನ್ನು ಅನುಪಮ್ ಖೇರ್ ಅವರು ಮಾಡುತ್ತಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ.

ಹೌದು... ಈಗಾಗಲೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ತಮಿಳು ಹಾಗೂ ತೆಲುಗು ರಿಮೇಕ್ ರೈಟ್ಸ್‌ನ್ನು ಪ್ರಕಾಶ್ ರೈ ಅವರು ಖರೀದಿಸಿರೋ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಹಾಗೇ ಹಿಂದಿ ರಿಮೇಕ್ ರೈಟ್ಸ್ ನ್ನು ಬೋನಿ ಕಪೂರ್ ಅವರು ಪಡೆದಿದ್ದಾರೆ ಅಂತಾ ಹೇಳಲಾಗಿತ್ತು.ಆದ್ರೀಗಪ್ರಕಾಶ್ ರೈ ಅವರೇ ಹಿಂದಿ ರಿಮೇಕ್ ರೈಟ್ಸ್ ನ್ನು ಪಡೆಯುವ ಒಲವು ತೋರಿದ್ದಾರೆ ಅಂತಾ ಹೇಳಲಾಗುತ್ತಿದೆ.
 
ಹಿಂದಿ ರಿಮೇಕ್‌ನಲ್ಲಿ ಅನಂತ್ ನಾಗ್ ಅವರು ಮಾಡಿದ ಪಾತ್ರವನ್ನು ಅಮಿತಾಬ್ ಬಚ್ಚನ್ ಅವರಿಂದ ಮಾಡಿಸುವ ಪ್ಲಾನ್ ರೈ ಅವರದ್ದಂತೆ. ಹಾಗಾಗಿ ಅಮಿತಾಬ್ ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾವನ್ನು ನೋಡಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ಹಿಂದಿ ರಿಮೇಕ್ ಅನ್ನು ನೀಡಿ ಅಂತಾ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ರೈ ಮನವಿ ಮಾಡಿದ್ದಾರಂತೆ.
 
ಇನ್ನು ಈಗಾಗಲೇ ಬೋನಿ ಕಪೂರ್ ಅವರು ಸಿನಿಮಾದ ರಿಮೇಕ್ ರೈಟ್ಸ್ ಪಡೆಯಲು ಯತ್ನಿಸುತ್ತಿದ್ದಾರೆ. ಹೀಗಿರುವಾಗಲೇ ಪ್ರಕಾಶ್ ರೈ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾಗಿ ಯಾರಿಗೆ ಸಿಗುತ್ತೆ ರೈಟ್ಸ್ ಅಮಿತಾಬ್ ನಟಿಸುತ್ತಾರಾ ಇಲ್ವಾ ಅನ್ನೋದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments