ಬೆಂಗಳೂರು: ಕೊರೋನಾ ಸಂಕಷ್ಟದ ಸಮಯದಲ್ಲಿ ಸ್ಯಾಂಡಲ್ ವುಡ್ ಕಲಾವಿದರೂ ತಮ್ಮ ಅಭಿಮಾನಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ನಟ ಅರ್ಜುನ್ ಗೌಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಕೊರೋನಾ ರೋಗಿಗಳು, ಮೃತದೇಹಗಳನ್ನು ಸಾಗಿಸುವ ಆಂಬ್ಯುಲೆನ್ಸ್ ಚಾಲಕರಾಗಿ ಅರ್ಜುನ್ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡಾ ಅರ್ಜುನ್ ಗೌಡವನ್ನು ವಿಶೇಷವಾಗಿ ಉಲ್ಲೇಖಿಸಿ ಅಭಿನಂದಿಸಿದ್ದಾರೆ.
ಕಳೆದ ಬಾರಿ ಲಾಕ್ ಡೌನ್ ಆಗಿದ್ದಾಗ ಹಲವು ಸ್ಟಾರ್ ನಟರು ಸಂಕಷ್ಟಕ್ಕೀಡಾದವರಿಗೆ ಊಟ, ಆಹಾರ ಕಿಟ್ ಒದಗಿಸಿದ್ದರು. ನಟ ದಿಗಂತ್ ಬೈಕ್ ನಲ್ಲಿ ಡೆಲಿವರಿ ಬಾಯ್ ರೀತಿ ಔಷಧಗಳನ್ನು ಹೋಂ ಡೆಲಿವರಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಆದರೆ ಅರ್ಜುನ್ ಗೌಡ ಇನ್ನೂ ಹೆಚ್ಚು ರಿಸ್ಕ್ ತೆಗೆದುಕೊಂಡಿದ್ದಾರೆ.