Webdunia - Bharat's app for daily news and videos

Install App

AR Rehman Birthday: ಎಆರ್ ರೆಹಮಾನ್ ಟಾಪ್ 10 ಹಾಡುಗಳು, ಇದರಲ್ಲಿ ನಿಮ್ಮ ಫೇವರಿಟ್ ಯಾವುದು

Krishnaveni K
ಸೋಮವಾರ, 6 ಜನವರಿ 2025 (08:48 IST)
ಬೆಂಗಳೂರು: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನದಂದು ಅವರ ಟಾಪ್ 10 ಹಾಡುಗಳ ಬಗ್ಗೆ ನೋಡೋಣ. ಇದರಲ್ಲಿ ನಿಮ್ಮ ಮೆಚ್ಚಿನ ಹಾಡು ಯಾವುದು ಹೇಳಿ.

ರೋಜಾ ಸಿನಿಮಾದಿಂದ ಇತ್ತೀಚೆಗಿನವರೆಗೂ ಎಆರ್ ರೆಹಮಾನ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಹಾಡುಗಳಲ್ಲಿ ಸಣ್ಣ ಮ್ಯೂಸಿಕ್ ಇನ್ಸ್ಟ್ರುಮೆಂಟ್ ನ ಶಬ್ಧವೂ ಕೇಳುಗರ ಗಮನ ಸೆಳೆಯುವುದೇ ವಿಶೇಷ. ಅವರ ಹೆಚ್ಚಿನ ಹಾಡುಗಳಲ್ಲಿ ತಬಲಾ, ಹಾರ್ಮೋನಿಯಂ ಸೇರಿದಂತೆ ಸಾಂಪ್ರದಾಯಿಕ ಗಝಲ್ ಶೈಲಿಯ ಝಲಕ್ ಕಾಣಬಹುದಾಗಿದೆ. ಈ ಕಾರಣಕ್ಕೇ ಕೇಳಗರಿಗೆ ಅವರ ಹಾಡುಗಳು ಇಷ್ಟವಾಗುತ್ತದೆ.

ಎಆರ್ ರೆಹಮಾನ್ ಎವರ್ ಗ್ರೀನ್ ಹಾಡುಗಳು
  1. ಏ ಹಸೀಂ ವಾದಿಯಾ: ರೋಜಾ ಸಿನಿಮಾದ ಈ ಹಾಡು ಇಂದಿಗೂ ಯುವ ಪ್ರೇಮಿಗಳಿಂದ ಹಿಡಿದು ರೀಲ್ಸ್ ಮಾಡೋರವರೆಗೂ ಎವರ್ ಗ್ರೀನ್ ಫೇವರಿಟ್. ಎಸ್ ಪಿ ಬಾಲಸುಬ್ರಹ್ಮಣ್ಯಂ, ಕೆಎಸ್ ಚಿತ್ರಾ ಮತ್ತು ಎಆರ್ ರೆಹಮಾನ್ ಈ ಹಾಡಿಗೆ ಧ್ವನಿ ನೀಡಿದ್ದಾರೆ.
  2. ಕೆಹ್ನಾ ಹೇ ಕ್ಯಾ: ಕೆಎಸ್ ಚಿತ್ರಾ ಅವರು ಹಾಡಿದ ಈ ಹಾಡು ಬಾಂಬೆ ಸಿನಿಮಾದ್ದು. ದುಃಖ ಮತ್ತು ಸಂತೋಷ ಎರಡೂ ಭಾವನೆಗಳನ್ನು ಈ ಹಾಡಿನಲ್ಲಿ ನೋಡಬಹುದು.
  3. ಸಾಥಿಯಾ: ಸಾಥಿಯಾ ಸಿನಿಮಾದ ಈ ಹಾಡು ಯವ ಪ್ರೇಮಿಗಳ ಮೆಚ್ಚಿನ ಹಾಡು. ಹಿಂದಿಯಲ್ಲಿ ಸೋನು ನಿಗಂ ಮಧುರ ಧ್ವನಿಯಲ್ಲಿ ಈ ಹಾಡು ಹಾಡಿದ್ದಾರೆ.
  4. ಮುಕ್ಕಾಲ ಮುಕ್ಕಾಬುಲ್ಲಾ: ಮನೊ ಹಾಗೂ ಸ್ವರ್ಣಲತಾ ಹಾಡಿದ ಈ ಹಾಡು ಪಡ್ಡೆ ಹೈಕಗಳಿಂದ ಹಿಡಿದು ವಯೋವೃದ್ಧರ ಬಾಯಲ್ಲಿ ಕುಣಿಯುತ್ತಿದ್ದ ಹಾಡು. ಕಾದಲನ್ ಸಿನಿಮಾದ ಹಾಡು ಇದಾಗಿದೆ.
  5. ಚಯ್ಯಾ ಚಯ್ಯಾ: ಚಲಿಸುತ್ತಿರುವ ರೈಲಿನ ಮೇಲೆ ನಾಯಕ ನಾಯಕಿ ಕುಣಿಯುವ ಈ ಹಾಡು ಒಂದು ಕಾಲದ ಸೂಪರ್ ಹಿಟ್ ಹಾಡು. ಸುಖ್ ವಿಂದರ್ ಸಿಂಗ್, ಸ್ವಪ್ನ ಅವಸ್ಥಿ ಹಾಡಿದ್ದಾರೆ.
  6. ಮಸಕ್ಕಲಿ: ಡೆಲ್ಲಿ 6 ಸಿನಿಮಾದ ಈ ಹಾಡನ್ನು ಮೋಹಿತ್ ಚೌಹಾಣ್ ಹಾಡಿದ್ದಾರೆ. ಎಆರ್ ರೆಹಮಾನ್ ಕನ್ಸರ್ಟ್ ಗಳಲ್ಲಿ ಈಗಲೂ ಇದು ಟಾಪ್ ಹಾಡಾಗಿರುತ್ತದೆ.
  7. ತು ಹೀ ರೇ: ಬಾಂಬೆ ಸಿನಿಮಾದ ಈ ಹಾಡನ್ನು ಯಾರು ತಾನೇ ಮರೆಯಲು ಸಾಧ್ಯ? ಹರಿಹರನ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿದ ಹಾಡು ಇದಾಗಿದೆ.
  8. ವಂದೇ ಮಾತರಂ: ದೇಶಭಕ್ತಿಯನ್ನು ಬಡಿದೇಳಿಸುವ ವಂದೇ ಮಾತರಂ ಹಾಡು ಸಿನಿಮಾಗಾಗಿ ಮಾಡಿದ ಹಾಡು ಅಲ್ಲದೇ ಇದ್ದರೂ ಅಷ್ಟೇ ಮ್ಯಾಜಿಕ್ ಮಾಡಿತ್ತು. ಸ್ವತಃ ಎಆರ್ ರೆಹಮಾನ್ ಇದನ್ನು ಹಾಡಿದ್ದಾರೆ.
  9. ಕ್ವಾಜಾ ಮೇರೇ ಕ್ವಾಜಾ: ಎಆರ್ ರೆಹಮಾನ್ ತಮಗೆ ಗಝಲ್ ಶೈಲಿಯ ಹಾಡಿನ ಮೇಲಿರುವ ಪ್ರೀತಿಯನ್ನು ಸಾರಿ ಹೇಳಿರುವ ಹಾಡು ಇದು. ಜೋಧಾ ಅಕ್ಬರ್ ಸಿನಿಮಾದ ಈ ಹಾಡನ್ನು ಅವರೇ ಹಾಡಿದ್ದಾರೆ.
  10. ಜೈ ಹೋ: ಎಆರ್ ರೆಹಮಾನ್ ಗೆ ಆಸ್ಕರ್ ಗೆದ್ದುಕೊಟ್ಟ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ಹಾಡು. ಇದಕ್ಕೆ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಕೂಡಾ ಹಾಡಿದ್ದಾರೆ ಎನ್ನುವುದು ವಿಶೇಷ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments