ಎಆರ್ ರೆಹಮಾನ್ ಸಹವಾದಕಿ ಮೋಹಿನಿಯಿಂದಲೂ ವಿಚ್ಛೇದನ ಘೋಷಣೆ

Sampriya
ಬುಧವಾರ, 20 ನವೆಂಬರ್ 2024 (17:03 IST)
Photo Courtesy X
ಮುಂಬೈ: ಖ್ಯಾತ ಗಾಯಕ ಎಆರ್ ರೆಹಮಾನ್ ಅವರು ತಮ್ಮ ಸುದೀರ್ಘವಾದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ಟೀಂನ ಸದಸ್ಯೆ, ಖ್ಯಾತ ಗಿಟಾರ್ ವಾದಕಿ ಮೋಹಿನಿ ಡೇ ಅವರು ಕೂಡ ತಮ್ಮ ದಾಂಪತ್ಯ ಜೀವನ ಮುರಿದುಬೀಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕೋಲ್ಕತ್ತಾ ಮೂಲದ ಮೋಹಿನಿ ಅವರು ಎಆರ್‌ ರೆಹಮಾನ್ ಟೀಂನಲ್ಲಿ ವಿಶ್ವದಾದ್ಯಂತ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇವರು ರೆಹಮಾನ್ ಅವರ ಸಂಗೀತ ತಂಡದ ಪ್ರಮುಖ ಭಾಗವಾಗಿದ್ದಾರೆ.

ರೆಹಮಾನ್ ಅವರು ತಮ್ಮ ಪತ್ನಿಗೆ ವಿಚ್ಛೇಧನ ನೀಡುತ್ತಿರುವ ಹೇಳಿಕೆ ಬೆನ್ನಲ್ಲೇ ಮೋಹಿನಿ ಅವರು ಕೂಡಾ ತಮ್ಮ ಪತಿ ಸಂಗೀತ ನಿರ್ದೇಶಕ ಮಾರ್ಕ್ ಹರ್ಸುಚ್ ಅವರಿಂದ ಬೇರ್ಪಟ್ಟಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮೋಹಿನಿ ಅವರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಹೀಗಿದೆ:

ಆತ್ಮೀಯ ಸ್ನೇಹಿತರು, ಕುಟುಂಬ, ಅಭಿಮಾನಿಗಳು ಮತ್ತು ಅನುಯಾಯಿಗಳೇ, ಭಾರವಾದ ಹೃದಯದಿಂದ, ಮಾರ್ಕ್ ಮತ್ತು ನಾನು ನಾವು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ.

ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆಯಾಗಿ, ಇದು ನಮ್ಮ ನಡುವಿನ ಪರಸ್ಪರ ತಿಳುವಳಿಕೆಯಾಗಿದೆ. ನಾವು ಉತ್ತಮ ಸ್ನೇಹಿತರಾಗಿ ಉಳಿದಿರುವಾಗ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರಿಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ.

ನಾವು ಇನ್ನೂ ಮಾಮೊಗಿ ಮತ್ತು ಮೋಹಿನಿ ಡೇ ಗುಂಪುಗಳು ಸೇರಿದಂತೆ ಹಲವಾರು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು ಯಾವಾಗಲೂ ಒಟ್ಟಿಗೆ ಚೆನ್ನಾಗಿ ಕೆಲಸ ಮಾಡುವ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅದು ನಿಲ್ಲುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments