ಗುಗ್ಗು ನನ್ನ ಮಗ ಎಂದ ರಜತ್: ಬಿಗ್‌ಬಾಸ್‌ ಸಹವಾಸ ಸಾಕು, ಹೊರನಡೆಯುತ್ತೇನೆಂದ ಗೋಲ್ಡ್‌ ಸುರೇಶ್

Sampriya
ಬುಧವಾರ, 20 ನವೆಂಬರ್ 2024 (15:08 IST)
Photo Courtesy X
ಬೆಂಗಳೂರು: ಕನ್ನಡದ ಬಿಗ್ ಬಾಸ್‌ನ 11ನೇ ಆವೃತ್ತಿಗೆ ಶೋಭಾ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೇ  ಸ್ಪರ್ಧಿಗಳು ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ.

ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್‌ಗೆ ಅವಮಾನಿಸಿದ್ದಾರೆ. ಅದಕ್ಕೆ ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ ಬಾಸ್ ಬಳಿ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.

ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್ ಬಾಸ್ ಆಟದ ನಿಯಮದಲ್ಲಿತ್ತು. ಈ ಟಾಸ್ಕ್‌ನಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ಬಿಗ್ ಫೈಟ್ ನಡೆದಿದೆ.  

ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ವಾದಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್‌ಗೆ ಬಳಸಿದ್ದಾರೆ. ಗುಗ್ಗು ನನ್ನ ಮಗ, ವೇಸ್ಟ್ ನನ್ನ ಮಗ ಎಂಬ ಪದಗಳನ್ನು ರಜತ್ ಬಳಸಿ ಸುರೇಶ್‌ಗೆ ಕೌಂಟರ್ ಕೊಟ್ಟಿದ್ದಾರೆ.

ತಮ್ಮ ಮೇಲೆ ಬಳಕೆ ಆಗಿರುವ ಪದಗಳು ನಿಂದಿಸಿರುವ ರೀತಿ ನನಗೆ ಬೇಸರ ಆಗಿದೆ. ಬಿಗ್ ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಟ ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಸುರೇಶ್‌ಗೆ ಶಿಶಿರ್‌, ಮೋಕ್ಷಿತಾ ಅದೆಷ್ಟೇ ಸಮಾಧಾನ ಮಾಡಿದರು. ಕೇಳೋ ಪರಿಸ್ಥಿತಿಯಲ್ಲಿ ಅವರಿಲ್ಲ. ಇದನ್ನು ಪ್ರೋಮೊದಲ್ಲಿ ಕಾಣಬಹುದಾಗಿದೆ.

 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ