Publish Date: Wed, 20 Nov 2024 (17:03 IST)
Updated Date: Wed, 20 Nov 2024 (17:06 IST)
ಮುಂಬೈ: ಖ್ಯಾತ ಗಾಯಕ ಎಆರ್ ರೆಹಮಾನ್ ಅವರು ತಮ್ಮ ಸುದೀರ್ಘವಾದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ಟೀಂನ ಸದಸ್ಯೆ, ಖ್ಯಾತ ಗಿಟಾರ್ ವಾದಕಿ ಮೋಹಿನಿ ಡೇ ಅವರು ಕೂಡ ತಮ್ಮ ದಾಂಪತ್ಯ ಜೀವನ ಮುರಿದುಬೀಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕೋಲ್ಕತ್ತಾ ಮೂಲದ ಮೋಹಿನಿ ಅವರು ಎಆರ್ ರೆಹಮಾನ್ ಟೀಂನಲ್ಲಿ ವಿಶ್ವದಾದ್ಯಂತ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇವರು ರೆಹಮಾನ್ ಅವರ ಸಂಗೀತ ತಂಡದ ಪ್ರಮುಖ ಭಾಗವಾಗಿದ್ದಾರೆ.
ರೆಹಮಾನ್ ಅವರು ತಮ್ಮ ಪತ್ನಿಗೆ ವಿಚ್ಛೇಧನ ನೀಡುತ್ತಿರುವ ಹೇಳಿಕೆ ಬೆನ್ನಲ್ಲೇ ಮೋಹಿನಿ ಅವರು ಕೂಡಾ ತಮ್ಮ ಪತಿ ಸಂಗೀತ ನಿರ್ದೇಶಕ ಮಾರ್ಕ್ ಹರ್ಸುಚ್ ಅವರಿಂದ ಬೇರ್ಪಟ್ಟಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮೋಹಿನಿ ಅವರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಹೀಗಿದೆ:
ಆತ್ಮೀಯ ಸ್ನೇಹಿತರು, ಕುಟುಂಬ, ಅಭಿಮಾನಿಗಳು ಮತ್ತು ಅನುಯಾಯಿಗಳೇ, ಭಾರವಾದ ಹೃದಯದಿಂದ, ಮಾರ್ಕ್ ಮತ್ತು ನಾನು ನಾವು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ.
ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆಯಾಗಿ, ಇದು ನಮ್ಮ ನಡುವಿನ ಪರಸ್ಪರ ತಿಳುವಳಿಕೆಯಾಗಿದೆ. ನಾವು ಉತ್ತಮ ಸ್ನೇಹಿತರಾಗಿ ಉಳಿದಿರುವಾಗ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರಿಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ.
ನಾವು ಇನ್ನೂ ಮಾಮೊಗಿ ಮತ್ತು ಮೋಹಿನಿ ಡೇ ಗುಂಪುಗಳು ಸೇರಿದಂತೆ ಹಲವಾರು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು ಯಾವಾಗಲೂ ಒಟ್ಟಿಗೆ ಚೆನ್ನಾಗಿ ಕೆಲಸ ಮಾಡುವ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅದು ನಿಲ್ಲುವುದಿಲ್ಲ ಎಂದು ಬರೆದುಕೊಂಡಿದ್ದಾರೆ.