ಟೆಲಿವಿಜನ್ ಕಾರ್ಯಕ್ರಮದಲ್ಲಿ ಸೈನಿಕರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟ ಓಂಪುರಿ ವಿರುದ್ಧ ಜೈಪುರ್ ಗಾಂಧಿ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಬಿವಿಪಿ ಕಾರ್ಯಕರ್ತ ಶಂಕರ್ ಗೋರಾ ಎನ್ನುವವರು ಹಿರಿಯ ನಟ ಓಂಪುರಿ ವಿರುದ್ಧ ಸೈನಿಕರಿಗೆ ಅಪಮಾನ ಮಾಡಿದ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಭಾಶ್ ಚಾಂದ್ ತಿಳಿಸಿದ್ದಾರೆ.
ದೇಶಕ್ಕಾಗಿ ಹಗಲಿರಳು ದುಡಿದು, ತ್ಯಾಗ ಬಲಿದಾನದ ಪ್ರತೀಕವಾಗಿರುವ ಭಾರತೀಯ ಸೈನಿಕರ ವಿರುದ್ದ ಅವಹೇಳನವಾಗಿ ಹೇಳಿಕೆ ನೀಡಿ ಅಪಮಾನ ಮಾಡಿದ್ದರಿಂದ ಅವರ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಲಾಗಿದೆ ಎಂದು ಎಬಿವಿಪಿ ಕಾರ್ಯಕರ್ತ ಶಂಕರ್ ಗೊರೆ ತಿಳಿಸಿದ್ದಾರೆ.
ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದು ಬೇರೆ ಯಾವುದೇ ಠಾಣೆಯಲ್ಲಿ ನಟ ಓಂಪುರಿ ವಿರುದ್ಧ ಕೇಸ್ ದಾಖಲಾಗಿಲ್ಲ.ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚಾಂದ್ ಮಾಹಿತಿ ನೀಡಿದ್ದಾರೆ.
ಉರಿ ಘಟನೆಯ ನಂತರ ಪಾಕ್ ಕಲಾವಿದರಿಗೆ ನಿಷೇಧ ಹೇರಿದ ಇಂಡಿಯನ್ ಮೋಶನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಬಗ್ಗೆ ಚರ್ಚೆ ನಡೆಸಲು ಟೆಲಿವಿಜನ್ ಕಾರ್ಯಕ್ರಮದಲ್ಲಿ ಹಿರಿಯ ನಟ ಓಂಪುರಿಗೆ ಆಹ್ಲಾನ ನೀಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ