Select Your Language

Notifications

webdunia
webdunia
webdunia
webdunia

ಟ್ರ್ಯಾಕ್ ಬದಲಾಯಿಸಿದ ಅನೂಪ್ ಸೀಳಿನ್

ಟ್ರ್ಯಾಕ್ ಬದಲಾಯಿಸಿದ ಅನೂಪ್ ಸೀಳಿನ್
Bangalore , ಮಂಗಳವಾರ, 14 ಫೆಬ್ರವರಿ 2017 (21:14 IST)
ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ಮೆಲೋಡಿ ಹಾಡುಗಳಿಗೆ ಹೆಸರಾದವರು. ವಿಶೇಷವಾಗಿ ರೊಮ್ಯಾಂಟಿಕೆ ಹಾಡುಗಳಲ್ಲಿ ಪಳಗಿದ ಕೈ ಅವರದು. ಸದಾ ಕ್ಲಾಸ್ ಸಂಗೀತವನ್ನೇ ಕೊಡುತ್ತಾ ಬಂದವರು ಅನೂಪ್ ಸೀಳಿನ್. 
 
ಆದರೆ ಇದೇ ಮೊದಲ ಬಾರಿಗೆ ತಮ್ಮ ಟ್ರ್ಯಾಕ್ ಬದಲಾಯಿಸುತ್ತಿದ್ದಾರೆ. ಬೆಂಗಳೂರು ಅಂಡರ್‌ವರ್ಲ್ಡ್ ಚಿತ್ರಕ್ಕಾಗಿ ಮಾಸ್ ಹಾಡೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪಿ.ಎನ್. ಸತ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಆದಿತ್ಯಾ ನಾಯಕನಟ. 
 
ನಾನು ಮಾಸ್ ಸಾಂಗ್ ಮಾಡಲ್ಲ ಎಂದು ಇದುವರೆಗೆ ಎಲ್ಲರೂ ದೂರುತ್ತಿದ್ದರು. ಆ ಅಪವಾದದಿಂದ ಹೊರಬರುತ್ತಿದ್ದೇನೆ. ಫೆಬ್ರವರಿ 18ರಂದು ಹಾಡು ಆನ್‍ಲೈನ್‍ನಲ್ಲಿ ಲೋಕಾರ್ಪಣೆಯಾಗುತ್ತಿದೆ ಎಂದಿದ್ದಾರೆ ಅನೂಪ್. ಈ ಹಿಂದೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ’ಕರೆಂಟು ಹೋದ ಟೈಮಲಿ’ ಎಂಬ ಹಾಡನ್ನು ಮಾಡಿದ್ದರು ಅನೂಪ್.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸಲ್ಲಿ ಜಾಲಿ ಎಲ್‍ಎಲ್‍ಬಿ 2 ಜಾಲಿ ರೈಡ್