Publish Date: Sat, 04 Mar 2017 (11:48 IST)
Updated Date: Sat, 04 Mar 2017 (11:51 IST)
ಬೆಳ್ಳಿಪರದೆಗೆ ಹತ್ತಿರವಾಗಿ ಕುಟುಂಬಕ್ಕೆ ದೂರವಾದ ಬೆಡಗಿ ಅಮಲಾ ಪೌಲ್. ರೀ ಎಂಟ್ರಿ ಮೂಲಕ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಈಗಾಗಲೆ ಅಮ್ಮ ಗ್ಲಾಮರ್ ಮೂಲಕ ಎಲ್ಲರ ಗಮನಸೆಳೆಯುತ್ತಿರುವ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ಲಾಮರ್ ಆಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ.
ಇತ್ತೀಚೆಗೆ ತೆರೆಕಂಡ ’ಹೆಬ್ಬುಲಿ’ ಚಿತ್ರ ಇದಕ್ಕೆ ನಿದರ್ಶನ. ಚಿತ್ರದಲ್ಲಿ ಗ್ಲಾಮರ್ ಗೊಂಬೆಯಂತೆ ಕಂಗೊಳಿಸಿದ್ದಾರೆ. ಒಬ್ಬ ವೈದ್ಯೆಯಾಗಿ ಕಾಣಿಸಿಕೊಂಡಿರುವ ಅವರು ಹೆಚ್ಚಾಗಿ ಹಾಡುಗಳಲ್ಲಿ ಮಿಂಚಿದ್ದಾರೆ. ಅವರ ಡ್ರೆಸ್ ನೋಡಿದವರು ಶಾಕ್ ಆಗಿದ್ದಾರೆ.
ಮದುವೆಗೆ ಮುನ್ನ ಅಮಲಾ ಪೌಲ್ ಈ ರೇಂಜ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಯರ್ರಾಬಿರ್ರಿ ಡ್ರೆಸ್ ಮಾಡಿಕೊಂಡು ಪಡ್ಡೆಗಳ ಆರಾಧ್ಯದೈವವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ಲಾಮರ್‌ನೊಂದಿಗೆ ಬೆಳ್ಳಿತೆರೆ ಬೆಳಗುವ ಲಕ್ಷಣಗಳಿಲ್ಲದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.