ಬಾಹುಬಲಿ-2 ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ನಿರ್ಮಾಣವಾಗುತ್ತಿದೆ. ಟಾಲಿವುಡ್`ನ ಪ್ರಸಿದ್ಧ ಚಿತ್ರ ನಿರ್ಮಾಒಕ ಅಲ್ಲು ಅರವಿಂದ್ 500 ಕೋಟಿ ರೂ. ವೆಚ್ಚದಲ್ಲಿ ರಾಮಾಯಣ ಕಥಾಧರಿತ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ತ್ರೀಡಿ ಮಾದರಿಯ ಸಿನಿಮಾ ಇದಾಗಿದೆ.
`ಇದೊಂದು ದೊಡ್ಡ ಜವಾಬ್ದಾರಿ. ರಾಮಾಯಣವನ್ನ ಅತ್ಯಂತ ಅದ್ಬುತವಾಗಿ ಬೇಳ್ಳಿಪರದೆ ಮೇಲೆ ತೋರಿಸಬೇಕಾದ ಅಗತ್ಯವಿದೆ. ಈ ಕೆಲಸಕ್ಕೆ ನಾವುಬದ್ಧರಾಗಿದ್ದು, ಅತಿರಂಜಿತವಾಗಿ ತೆರೆಮೇಲೆ ತರುತ್ತೇವೆ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಬಾಲಿವುಡ್`ನ ಖ್ಯಾತ ನಿರ್ಮಾಪಕರಾದ ಮಧು ಮಂಟೆನಾ ಮತ್ತು ಮಧು ಮಲ್ಹೋತ್ರಾ ಸಹ ಈ ಅದ್ದೂರಿ ಚಿತ್ರಕ್ಕೆ ಕೈಜೋಡಿಸುತ್ತಿದ್ದು, ಚಿತ್ರದ ನಿರ್ದೇಶಕರು ಮತ್ತು ಕಲಾವಿದರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ