Webdunia - Bharat's app for daily news and videos

Install App

ಮುದ್ದಿನ ಪ್ರಿನ್ಸೆಸ್ ಅಲ್ಲು ಅರ್ಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್

Webdunia
ಮಂಗಳವಾರ, 21 ನವೆಂಬರ್ 2023 (16:34 IST)
Photo Courtesy: Twitter
ಹೈದರಾಬಾದ್: ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅಲ್ಲು ಅರ್ಹಗೆ ಇಂದು ಜನ್ಮದಿನದ ಸಂಭ್ರಮ. ಸ್ಟೈಲಿಶ್ ತಾರೆಯ ಮುದ್ದಿನ ಪ್ರಿನ್ಸೆಸ್ ಇದೀಗ 7 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ.

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಸೋಷಿಯಲ್ ಮೀಡಿಯಾ ಮೂಲಕ ಸುಂದರ ಫೋಟೋಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಅಲ್ಲು ಅರ್ಹ ಈಗಾಗಲೇ ತೆಲುಗಿನಲ್ಲಿ ಸಮಂತಾ ನಾಯಕಿಯಾಗಿರುವ ಶಾಕುಂತಲಾ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾಳೆ. ಆಕೆಗೆ ಇನ್ನಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ. ಅಪ್ಪನಂತೇ ತೆಲುಗು ಸಿನಿಮಾದಲ್ಲಿ ಮುಂದೆ ಮಿಂಚುವ ಭರವಸೆ ಹುಟ್ಟಿಸಿದ್ದಾಳೆ.

ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಮಾತೃಭಾ಼ಷೆಯನ್ನೇ ಮರೆತು ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆ. ಆದರೆ ಅಲ್ಲು ಅರ್ಹ ಮಾತ್ರ ಶುದ್ಧ ತೆಲುಗಿನಲ್ಲೇ ಮಾತನಾಡುತ್ತಾಳೆ ಎಂದು ಈ ಹಿಂದೆ ಸಮಂತಾ ಹೊಗಳಿದ್ದರು. ಪುಟಾಣಿ ಅರ್ಹಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments