Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯ ಆರೋಪ: ಖ್ಯಾತ ಕಿರುತೆರೆ ನಟ ಚರಿತ್ ಬಾಳಪ್ಪ ಅರೆಸ್ಟ್‌

Sexual Assault Case, Charith Balappa Arrest, Who Is Charith Balappa

Sampriya

ಬೆಂಗಳೂರು , ಶುಕ್ರವಾರ, 27 ಡಿಸೆಂಬರ್ 2024 (16:21 IST)
Photo Courtesy X
ಬೆಂಗಳೂರು: ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಆರೋಪದಡಿ ಖ್ಯಾತ ಕಿರುತೆರೆ ನಟ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಕನ್ನಡದಲ್ಲಿ ಮುದ್ದುಲಕ್ಷ್ಮಿ, ಲವಲವಿಕೆ, ಸರ್ಪಸಂಬಂಧ ಸೇರಿದಂತೆ ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಚರಿತ್ ಬಾಳಪ್ಪ ಖ್ಯಾತಿ ಪಡೆದಿದ್ದರು.

ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಇದೀಗ ಚರಿತ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೂರಿನಲ್ಲಿ ಏನಿದೆ: ನಿನ್ನನ್ನ ಪ್ರೀತಿಸುತ್ತೇನೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಜೊತೆಗೆ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಸಹಚರರ ಜೊತೆ ಕಿರುಕುಳ ನೀಡಿದ್ದಾನೆ. ಹಣಕ್ಕೂ ಬೇಡಿಕೆಯಿಟ್ಟಿದ್ದು, ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವೀಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಮದುವೆಯಾಗಿದ್ದ ನಟ ಚರಿತ್ ಹಾಗೂ ಪತ್ನಿ ಮಂಜುಶ್ರೀ ಡಿವೋರ್ಸ್ ಪಡೆದಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಚರಿತ್ ವಿರುದ್ಧ ಪತ್ನಿ ಮಂಜುಶ್ರೀ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ಟ್ವಿಸ್ಟ್‌: ಮಿಡ್ ವೀಕ್‌ನಲ್ಲೇ ಎಲಿಮಿನೇಟ್‌ ಆದ್ರ ಫೈರ್‌ಬ್ರ್ಯಾಂಡ್‌