Select Your Language

Notifications

webdunia
webdunia
webdunia
webdunia

ಅದ್ದೂರಿಯಾಗಿ ಅಖಿಲ್ ಅಕ್ಕಿನೇನಿ ನಿಶ್ವಿತಾರ್ಥ

ಅದ್ದೂರಿಯಾಗಿ ಅಖಿಲ್ ಅಕ್ಕಿನೇನಿ ನಿಶ್ವಿತಾರ್ಥ
Hyderaba , ಶನಿವಾರ, 10 ಡಿಸೆಂಬರ್ 2016 (10:29 IST)
ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ನಟಿ ಅಮಲಾ ಪುತ್ರ ಅಖಿಲ್ ನಿಶ್ಚಿತಾರ್ಥ ಶ್ರೀಯಾ ಭೂಪಾಲ್ ಜೊತೆ ಹೈದರಾಬಾದ್‌ನಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಪ್ರಮುಖ ಉದ್ಯಮಿ ಜಿವಿಕೆ ಮೊಮ್ಮಗಳು ಶ್ರೀಯಾ ಭೂಪಾಲ್.
 
ಇವರಿಬ್ಬರು ಕಳೆದ ಕೆಲವು ತಿಂಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೇಮಿಸಿಕೊಳ್ಳುತ್ತಿದ್ದರು. ಇವರಿಬ್ಬರ ಪ್ರೇಮವನ್ನು ಅಂಗೀಕರಿಸಿದ ಎರಡೂ ಕುಟುಂಬಗಳು ಇಬ್ಬರಿಗೂ ಮದುವೆ ಮಾಡಿಸಲು ಒಪ್ಪಿದ್ದರು.
 
ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕೇವಲ ಆತ್ಮೀಯರು, ಗೆಳೆಯರು ಮಾತ್ರ ಸಾಕ್ಷಿಯಾಗಿದ್ದು, ಖಾಸಗಿ ಅತಿಥಿಗೃಹದಲ್ಲಿ ನಿಶ್ಚಿತಾರ್ಥ ನಡೆದಿದೆ. ಇದೀಗ ಇವರಿಬ್ಬರ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶ್ರೀಯಾ ಭೂಪಾಲ್ ಅವರು ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ವಿಮರ್ಶೆ: ಮೂವರು ಸ್ನೇಹಿತರ ಕನಸಿನ ಕತೆ ಜಾನ್ ಜಾನಿ ಜನಾರ್ಧನ್