Webdunia - Bharat's app for daily news and videos

Install App

ಬಿಡದಿ ಠಾಣೆಗೆ ವಿಚಾರಣೆಗೆ ಹಾಜರಾದ ನಟ ಅಜೇಯ್ ರಾವ್

Webdunia
ಗುರುವಾರ, 26 ಆಗಸ್ಟ್ 2021 (17:24 IST)
ಬೆಂಗಳೂರು: ಫೈಟರ್ ವಿವೇಕ್ ಸಾವಿಗೆ ಸಂಬಂಧಪಟ್ಟಂತೆ ನಟ ಅಜೇಯ್ ರಾವ್ ಇಂದು ಪೊಲೀಸ್ ವಿಚಾರಣೆಗೆ ಬಿಡದಿ ಠಾಣೆಗೆ ಬಂದಿದ್ದಾರೆ.


ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಅಜೇಯ್ ರಾವ್ ಕೂಡಾ ಶೂಟಿಂಗ್ ಸ್ಥಳದಲ್ಲಿದ್ದರು. ಹೀಗಾಗಿ ಪೊಲೀಸರು ಅವರನ್ನೂ ವಿಚಾರಣೆಗೆ ಕರೆಸಿದ್ದಾರೆ.

ನಿನ್ನೆ ನಟಿ ರಚಿತಾ ರಾಂ ಅವರನ್ನೂ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇಂದು ಅಜೇಯ್ ರಾವ್ ರನ್ನು ಕರೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಬಂದರೆ ಮತ್ತೆ ವಿಚಾರಣೆಗೆ ಹಾಜರಾಗುವುದಾಗಿ ಅಜೇಯ್ ರಾವ್ ಹೇಳಿದ್ದಾರೆ.

ಇನ್ನು, ತಾವು ಸಹಾಯ ಮಾಡಿಲ್ಲ ಎಂದು ಆರೋಪ ಮಾಡಿರುವವರಿಗೆ ತಿರುಗೇಟು ಕೊಟ್ಟಿರುವ ಅಜೇಯ್ ರಾವ್, ನಾನು ಹೆದರಿ ಓಡುವವನಲ್ಲ. ನನ್ನ ಬಗ್ಗೆ ಹೀಗೆ ಇಲ್ಲಸಲ್ಲದ ಆರೋಪ ಮಾಡಿದರೆ ನನ್ನ ಮೇಲೆ ಇನ್ ವೆಸ್ಟ್ ಮಾಡಿದ ಬೇರೆ ಇನ್ ವೆಸ್ಟರ್ ಗಳಿಗೂ ಭಯವಾಗುತ್ತದೆ. ಹೀಗಾಗಿ ನಾನು ಮುನ್ನೆಚ್ಚರಿಕಾ ಕ್ರಮವಾಗಿ ಜಾಮೀನಿಗೆ ಅರ್ಜಿ ಹಾಕಿದ್ದೆ. ಅದರ ಅರ್ಥ ನಾನು ಭಯಗೊಂಡು ತಲೆಮರೆಸಿಕೊಂಡು ಓಡಿ ಹೋಗಿಲ್ಲ. ಇದರಲ್ಲಿ ನನ್ನ ತಪ್ಪಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ದರ್ಶನ್ ಮಾತಾಡೋವರೆಗೂ ಇದೊಂದು ಕೆಲಸ ಮಾಡಲ್ವಂತೆ ಪ್ರಥಮ್

ರಮ್ಯಾ ಆಮೇಲೆ, ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ: ಶಿವಣ್ಣಗೆ ಡಿಬಾಸ್ ಫ್ಯಾನ್ಸ್ ಎಚ್ಚರಿಕೆ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ಮುಂದಿನ ಸುದ್ದಿ
Show comments