Webdunia - Bharat's app for daily news and videos

Install App

ಅಗ್ನಿಸಾಕ್ಷಿ ಪಾರ್ಟ್ 2 ಸದ್ಯದಲ್ಲೇ? ಸುಳಿವು ಕೊಟ್ಟ ರಾಜೇಶ್ ಧ್ರುವ

Webdunia
ಸೋಮವಾರ, 12 ಅಕ್ಟೋಬರ್ 2020 (09:35 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ  ಅಗ್ನಿಸಾಕ್ಷಿ ಧಾರವಾಹಿ ಅದೆಷ್ಟು ಹೆಂಗಳೆಯರಿಗೆ ಮೋಡಿ ಮಾಡಿತ್ತು. ಬರೋಬ್ಬರಿ ಆರು ವರ್ಷ ಮೂಡಿ ಬಂದ ಈ ಧಾರವಾಹಿ ಕೆಲವು ತಿಂಗಳ ಹಿಂದಷ್ಟೇ ಕತೆ ಮುಗಿಸಿತ್ತು.


ಆದರೆ ಈಗ ಮತ್ತೆ ಅಗ್ನಿಸಾಕ್ಷಿ ಪಾರ್ಟ್ 2 ಆರಂಭವಾಗುವ ಲಕ್ಷಣ ಕಾಣುತ್ತಿದೆ. ಮತ್ತೆ ನಾವು ಹೊಸ ಎಪಿಸೋಡ್ ನೊಂದಿಗೆ ಬರಲಿದ್ದೇವೆ ಎಂದು ನಟ ರಾಜೇಶ್ ಧ್ರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಹೀರೋ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ, ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ, ಮುಖ್ಯಮಂತ್ರಿ ಚಂದ್ರು, ಸುಕೃತಾ ನಾಗ್ ಇದ್ದಾರೆ. ಹೀಗಾಗಿ ಈ ಟೀಂ ಮತ್ತೆ ಹೊಸ ಎಪಿಸೋಡ್ ಗಳೊಂದಿಗೆ ಕಿರುತೆರೆಗೆ ಬರುವುದು ಪಕ್ಕಾ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೇ ಅಭಿಮಾನಿಗಳು ಖುಷಿಯಿಂದಲೇ ಪ್ರತಿಕ್ರಿಯಿಸುತ್ತಿದ್ದಾರೆ.

ಅತ್ತ ವಿಜಯ್ ಸೂರ್ಯ ಪ್ರೇಮಲೋಕ ಧಾರವಾಹಿ ಮುಗಿಸಿ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸಿ ಬಂದಿದ್ದಾರೆ. ಇತ್ತ ವೈಷ್ಣವಿ ಕೂಡಾ ಅಗ್ನಿಸಾಕ್ಷಿ ಬಳಿಕ ಒಂದು ಸಿನಿಮಾ ಬಿಟ್ಟರೆ ಕಿರುತೆರೆಯಲ್ಲಿ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಹೀಗಾಗಿ ಮತ್ತೆ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಜೋಡಿ ಮೋಡಿ ಮಾಡುವುದು ಪಕ್ಕಾ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮಚ್ಚು ರೀಲ್ಸ್ ಪ್ರಕರಣ: 14 ದಿನ ಜೈಲು ಸೇರಬೇಕಿದ್ದ ರಜತ್ ಕಿಶನ್‌ಗೆ ಸಿಕ್ತು ಬಿಡುಗಡೆ ಭಾಗ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಭಿನಯ, ಹುಡುಗು ಯಾರು ಗೊತ್ತಾ

ಮೌನವಾಗಿದ್ದ ನಟಿ ನಜ್ರೀಯಾ ಫಹಾದ್‌ ಶಾಕಿಂಗ್ ಪೋಸ್ಟ್, ಈ ಸುದ್ದಿಯನ್ನು ಕೇಳಲೂ ನಾವು ತಯಾರಿಲ್ಲ ಎಂದಾ ಫ್ಯಾನ್ಸ್‌

ಮುಂದಿನ ಸುದ್ದಿ
Show comments