ಬೆಂಗಳೂರು: ನಂಜುಂಡಿ ಕಲ್ಯಾಣ ಎನ್ನುವ ಸೂಪರ್ ಹಿಟ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ರಾಘವೇಂದ್ರ ರಾಜಕುಮಾರ್ ಮಾಲಾಶ್ರೀ ಅಭಿನಯದ ಈ ಚಲನಚಿತ್ರ ಅದೊಂದು ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಮತ್ತೊಮ್ಮೆ ಅದೇ ಹೆಸರಿನ ಚಲನಚಿತ್ರ ಮೂಡಿ ಬರಲಿದೆ.
ಮೂಲಗಳ ಪ್ರಕಾರ ತನುಷ್ ಎಂಬ ಯುವ ನಟ ಈ ಚಿತ್ರದ ನಾಯಕ. ತನುಷ್ ಗೆ ನಾಯಕಿಯಾಗಿ ರೋಸ್ ಸಿನಿಮಾ ಖ್ಯಾತಿಯ ಶ್ರಾವ್ಯಾ ನಟಿಸಲಿದ್ದಾರೆ. ಹೊಸ ನಂಜುಂಡಿಗೆ ಆಕ್ಷನ್ ಕಟ್ ಹೇಳುತ್ತಿರುವವರು ರಾಜೇಂದ್ರ ಕಾರಂತ್.
ಆದರೆ ಹಳೇ ನಂಜುಂಡಿ ಕಲ್ಯಾಣ ಸಿನಿಮಾ ಕತೆಗೂ ಇದಕ್ಕೂ ಸಂಬಂಧವೇನಿಲ್ಲ. ಇದರ ಕತೆಯೇ ಬೇರೆ. ಟೈಟಲ್ ಮಾತ್ರ ಒಂದೇ. ಇಂದಿನಿಂದ ಇದರ ಚಿತ್ರೀಕರಣ ಶುರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ