ನಾಗಚೈತನ್ಯ- ಶೋಭಿತಾ ನಿಶ್ಚಿತಾರ್ಥ ಬೆನ್ನಲ್ಲೇ ಜಿಮ್ ಹುಡುಗನ ಪ್ರಪೋಸ್‌ಗೆ ಇಪ್ರೇಸ್‌ ಆದ ನಟಿ ಸಮಂತಾ

Sampriya
ಸೋಮವಾರ, 12 ಆಗಸ್ಟ್ 2024 (18:35 IST)
Photo Courtesy X
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡುತ್ತಾ, ಅವರನ್ನು ಖುಷಿಯಾಗಿ ಇರಿಸುವಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ. ಅವರ ಈ ನಡೆಯಿಂದಲೇ ದೊಡ್ಡ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ.

ಈಚೆಗೆ ಸಮಂತಾ ಮಾಜಿ ಪತಿ ನಟ ನಾಗಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲಾ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅಭಿಮಾನಿಗಳು ನಮ್ಮ ಹೀರೋಯಿನೇ ಬೆಸ್ಟ್ ಎಂದು ಕೊಂಡಾಡಿದ್ದಾರೆ. ಮತ್ತೊಬ್ಬ ಹುಚ್ಚು ಅಭಿಮಾನಿ ನೀವು ಚಿಂತಿಸುವ ಅಗತ್ಯವಿಲ್ಲ , ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ನಾವಿಬ್ಬರು ಒಳ್ಳೆಯ ಜೋಡಿಯಾಗುತ್ತೇವೆ, ತನ್ನನ್ನು ಮದುವೆಯಾಗು ಎಂದು ನಟಿಗೆ ಕೇಳಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತನ್ನನ್ನು ಮದುವೆಯಾಗುವಂತೆ ಬೇಡಿಕೊಂಡಿರುವ ವಿಡಿಯೋ ನೋಡಿದ ಸಮಂತಾ ಅದಕ್ಕೆ ಪ್ರತಿಕ್ರಿಯಿಸಲು ಹಿಂಜರಿಯಲಿಲ್ಲ.

ಆಗಸ್ಟ್ 9 ರಂದು, ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥದ ಒಂದು ದಿನದ ನಂತರ, ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ  ರೀಲ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಂಡು ಸಮಂತಾ ಮನೆಗೆ ಪ್ರಪೋಸ್ ಮಾಡಲು ಹೋಗುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿನ ಹಿನ್ನೆಲೆಯು ಎಐ ಜಿಮ್ ಆಗಿದ್ದು, ಅಲ್ಲಿ ಅವನು ನಿಂತು ಕೆಲವೇ ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗುತ್ತೇನೆ ಮತ್ತು ನಾವಿಬ್ಬರು ಉತ್ತಮ ಜೋಡಿಯಾಗುತ್ತೇವೆ ಎಂದು ಹೇಳಿದ್ದಾರೆ.

ಫಿಟ್ನೆಸ್ ಉತ್ಸಾಹಿಯಾಗಿರುವ ಸಮಂತಾ ಅವರು, ವೀಡಿಯೊದಲ್ಲಿ ತನ್ನ ಹಿಂದೆ ಇರುವ ಜಿಮ್ ಅನ್ನು ಗಮನಿಸಿ, ' ಜಿಮ್ ನನಗೆ ಬಹುತೇಕ ಮನವರಿಕೆ ಮಾಡಿದೆ ♥️' ಎಂದು ಉತ್ತರಿಸಿದ್ದಾರೆ. ಆಕೆ ಅದನ್ನು ಉತ್ತಮ ಹಾಸ್ಯದಲ್ಲಿ ತೆಗೆದುಕೊಂಡಿದ್ದಾಳೆ ಎಂದು ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಈ ಜೋಡಿ 2021 ರಲ್ಲಿ ವಿಚ್ಛೇಧನ ಪಡೆದು ದೂರವಾದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments