Select Your Language

Notifications

webdunia
webdunia
webdunia
webdunia

ಏ ದಿಲ್ ಹೇ ಮಷ್ಕಿಲ್ ಕಲೆಕ್ಷನ್ 66 ಕೋಟಿ?

ಏ ದಿಲ್ ಹೇ ಮಷ್ಕಿಲ್ ಕಲೆಕ್ಷನ್ 66 ಕೋಟಿ?
ಮುಂಬೈ , ಗುರುವಾರ, 3 ನವೆಂಬರ್ 2016 (11:02 IST)
ಮುಂಬೈ: ಏ ದಿಲ್ ಹೇ ಮುಷ್ಕಿಲ್ ಚಿತ್ರ ಬಿಡುಗಡೆಯಾಗಿ ಒಂದು ವಾರವಾಗಿದೆ. ಈಗಾಗಲೇ ಇದು ಗಲ್ಲಾಪೆಟ್ಟಿಗೆಯಲ್ಲಿ 66 ಕೋಟಿ ರೂ. ಬಾಚಿಕೊಂಡಿದೆ ಎಂದು ಮೂಲಗಳು ಹೇಳಿವೆ.

ರಣಬೀರ್, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಅಭಿನಯ ಜನಕ್ಕೆ ಇಷ್ಟವಾಗಿದ್ದು, ಬಾಕ್ಸ್ ಆಫೀಸಿನಲ್ಲಿ ಒಂದೇ  ವಾರದಲ್ಲಿ 66 ಕೋಟಿ ಗಳಿಕೆ ಮಾಡಿದೆ ಎಂದಿದೆ ಚಿತ್ರ ತಂಡದ ಮೂಲಗಳು. ಸದ್ಯದಲ್ಲೇ ಇದು 100 ಕೋಟಿ ಗಡಿ ಮುಟ್ಟಲಿದೆ ಎನ್ನುವುದು ಅವರ ಆಶಾವಾದ.

ಮೊದಲ ದಿನವೇ ಚಿತ್ರ13 ಕೋಟಿ ಬಾಚಿಕೊಂಡಿದ್ದಾಗಿ ಚಿತ್ರ ತಂಡ ಹೇಳಿಕೊಂಡಿತ್ತು. ಹೀಗಾಗಿ ಇದೊಂದು ಹಿಟ್ ಚಿತ್ರ ಎನ್ನಬಹುದು.  ಬಹುಕಾಲದಿಂದ ಪ್ಲಾಪ್ ಚಿತ್ರಗಳನ್ನೇ ಕೊಟ್ಟಿದ್ದ ಚಾಕಲೇಟ್ ಹೀರೋ ರಣಬೀರ್ ಕಪೂರ್ ಗೆ ಇಂತಹದ್ದೊಂದು ಹಿಟ್ ಚಿತ್ರದ ಅಗತ್ಯವಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳು