Webdunia - Bharat's app for daily news and videos

Install App

ಸೆಲ್ಫೀ ಕೇಳಿಕೊಂಡು ಬಂದ ಸ್ವಚ್ಛತಾ ಕಾರ್ಮಿಕರ ಜೊತೆ ನಟಿ ರೋಜಾ ಈ ರೀತಿ ನಡೆದುಕೊಳ್ಳೋದಾ (ವಿಡಿಯೋ)

Krishnaveni K
ಬುಧವಾರ, 17 ಜುಲೈ 2024 (10:23 IST)
ತಮಿಳುನಾಡು: ಸಿನಿಮಾ ನಟಿಯರೆಂದರೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫೀ ಕೇಳುವುದು ಸಹಜ. ಆದರೆ ನಟಿ ರೋಜಾ ತಮ್ಮಲ್ಲಿ ಸೆಲ್ಫೀ ಕೇಳಿಕೊಂಡು ಬಂದ ಸ್ವಚ್ಛತಾ ಕಾರ್ಮಿಕರ ಜೊತೆ ನಡೆದುಕೊಂಡ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನಟಿ, ರಾಜಕಾರಣಿ  ರೋಜಾ ತಮಿಳುನಾಡಿನ ತಿರುಚೆಂದೂರು ಮುರುಗನ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಪತಿ ಕೂಡಾ ಇದ್ದರು. ನಟಿ ರೋಜಾರನ್ನು ನೋಡಿದ ದೇವಾಲಯ ಸಿಬ್ಬಂದಿ, ಭಕ್ತರು ಅವರ ಜೊತೆ ಸೆಲ್ಫೀಗೆ ಮುಗಿಬಿದ್ದರು. ಎಲ್ಲರಿಗೂ ರೋಜಾ ಸೆಲ್ಫೀಗೆ ಪೋಸ್ ಕೊಟ್ಟರು.

ಆದರೆ ಇಬ್ಬರು ಸ್ವಚ್ಛತಾ ಕಾರ್ಮಿಕರು ಸೆಲ್ಫೀಗಾಗಿ ಹತ್ತಿರ ಬಂದಾಗ ಕೈ ಸನ್ನೆಯಲ್ಲೇ ದೂರ ನಿಲ್ಲುವಂತೆ ಸೂಚಿಸಿದ್ದಾರೆ. ಸೆಲ್ಫೀಗಾಗಿ ನಗು ನಗುತ್ತಾ ರೋಜಾ ಬಳಿ ನಿಲ್ಲಲು ಹೊರಟ ಇಬ್ಬರು ಮಹಿಳಾ ಕಾರ್ಮಿಕರು ಪೆಚ್ಚಾಗಿದ್ದಾರೆ. ಬಳಿಕ ಸ್ವಲ್ಪ ದೂರದಲ್ಲೇ ನಿಂತು ಸೆಲ್ಫೀ ತೆಗೆಸಿಕೊಂಡಿದ್ದಾರೆ.

ರೋಜಾ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ವೈಎಸ್ ಆರ್ ಪಿ ನಾಯಕಿ ರೋಜಾ ಈಗಲೂ ಜಾತಿ, ವರ್ಣಬೇಧ ಮಾಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ಟೀಕೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments