ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ ಡ್ರಗ್ ಸೇರಿಕೊಂಡಿರುವ ಬಗ್ಗೆ ಎನ್ ಸಿ ಬಿ ತನಿಖೆ ನಡೆಸುತ್ತಿದೆ.
ಡ್ರಗ್ ಡೀಲರ್ ಜೊತೆ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಸಂಪರ್ಕ ಹೊಂದಿರೋದು ಬಹಿರಂಗವಾಗಿದೆ. ಆದರೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ ಇದುವರೆಗೂ ರಿಯಾ ಚಕ್ರವರ್ತಿಯ ರಕ್ತ ಹಾಗೂ ಉಗುರು ಮಾದರಿ ಸಂಗ್ರಹಿಸಿಲ್ಲ ಎನ್ನಲಾಗುತ್ತಿದೆ.
ಸಂದರ್ಶನವೊಂದರಲ್ಲಿ, ರಿಯಾ ತನ್ನ ರಕ್ತದ ಮಾದರಿಯನ್ನು ಡ್ರಗ್ ಪರೀಕ್ಷೆಗಾಗಿ ಸಲ್ಲಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಳು.
ಆದರೆ ಡ್ರಗ್ ಸೇವಿಸಿ ಒಂದು ವಾರದ ಬಳಿಕ ಬ್ಲಡ್ ಪರೀಕ್ಷೆ ನಡೆಸಿದರೆ ಏನೂ ಉಪಯೋಗವಾಗಲ್ಲ. ಆಗ ಬ್ಲಡ್ ನಲ್ಲಿ ಡ್ರಗ್ ಅಂಶ ಪತ್ತೆಯಾಗೋದಿಲ್ಲ. ಹೀಗಾಗಿ ಡ್ರಗ್ ಸೇವಿಸಿದ ಒಂದು ವಾರದೊಳಗೆ ಮಾತ್ರ ಬ್ಲಡ್ ಪರೀಕ್ಷೆ ಮಾಡಿದರೆ ಪರಿಣಾಮಕಾರಿಯಾಗುತ್ತದೆ ಎಂದು ಎನ್ ಸಿ ಬಿ ಮೂಲಗಳು ತಿಳಿಸಿವೆ.