Webdunia - Bharat's app for daily news and videos

Install App

Kamal Hassan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ನೀಡಿದ ರಂಜನಿ ರಾಘವನ್: ಇದು ಚೆನ್ನಾಗಿರೋದು ಎಂದ ಕನ್ನಡಿಗರು

Krishnaveni K
ಸೋಮವಾರ, 2 ಜೂನ್ 2025 (14:44 IST)
ಬೆಂಗಳೂರು: ಕನ್ನಡ ವಿವಾದದಿಂದಾಗಿ ಆಕ್ರೋಶಕ್ಕೊಳಗಾಗಿರುವ ಬಹುಭಾಷಾ ನಟ ಕಮಲ್ ಹಾಸನ್ ಗೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ತಾವು ಬರೆದ ಕನ್ನಡ ಪುಸ್ತಕವೊಂದನ್ನು ನೀಡಿದ್ದು ಕನ್ನಡಿಗರು ಇದಕ್ಕೆ ಪರ್ಫೆಕ್ಟ್ ಎಂದು ಹೊಗಳಿದ್ದಾರೆ.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಅವರಿಗೆ ಕ್ಷಮೆ ಯಾಚಿಸಲು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಆದರೆ ಅವರು ಮಾತ್ರ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಉದ್ಧಟತನ ತೋರಿದ್ದಾರೆ.

ಘಟನೆ ಬಗ್ಗೆ ಹಲವು ಸೆಲೆಬ್ರಿಟಿಗಳು, ಸಾಮಾನ್ಯರು ಕಟುವಾದ ಶಬ್ಧಗಳಲ್ಲಿ ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಕನ್ನಡತಿ ರಂಜನಿ ರಾಘವನ್ ಮಾತ್ರ ಒಂದೇ ಒಂದು ಮಾತನಾಡದೇ ಫೋಟೋ ಮೂಲಕವೇ ಕಮಲ್ ಹಾಸನ್ ಗೆ ತಿರುಗೇಟು ನೀಡಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ರಂಜನಿ ರಾಘವನ್ ಬರಹಗಾರ್ತಿ ಕೂಡಾ. ತಾವೇ ಬರೆದ ಕತೆ ಡಬ್ಬಿ ಪುಸ್ತಕದ ಪ್ರತಿಯೊಂದನ್ನು ಕಮಲ್ ಹಾಸನ್ ಗೆ ನೀಡುತ್ತಿರುವ ಫೋಟೋ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಂಜಿನಿ ರಾಘವನ್ ‘ಕಮಲ್ ಸರ್ ಗೆ ಒಂದು ಕನ್ನಡ ಪುಸ್ತಕ’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸೈಲೆಂಟಾಗಿಯೇ ಕಮಲ್ ಹಾಸನ್ ಗೆ ಬಿಸಿ ಮುಟ್ಟಿಸಿದ್ದಾರೆ. ಅವರ ಈ ಫೋಟೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಸರಿಯಾಗಿ ಮಾಡಿದ್ದೀರಿ ಮೇಡಂ. ಹಾಗೆಯೇ ಸ್ವಲ್ಪ ನಿಮ್ಮ ಕನ್ನಡತಿ ಧಾರವಾಹಿಯನ್ನೂ ಅವರಿಗೆ ತೋರಿಸಬೇಕಿತ್ತು ಎಂದಿದ್ದಾರೆ. ಇನ್ನು ಕೆಲವರು ಇದು ಆಕ್ಚ್ಯುವಲೀ ಚೆನ್ನಾಗಿರೋದು ಎಂದು ಕೊಂಡಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by ರಂಜನಿ ರಾಘವನ್ (@ranjani.raghavan)

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಮುಂದಿನ ಸುದ್ದಿ
Show comments