ನನ್ನ ಗಂಡನ ಜತೆ ಇರಲು ಅವಕಾಶ ಕಲ್ಪಿಸಿ..ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿ ನನ್ನ ಗಂಡನಿಂದ ಕೊಡಿಸಿ..ಎಂದು ಇತ್ತೀಚೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು ಒಂದು ಕಾಲದ ನಟಿ ರಂಭಾ. ಪತಿ ಇಂದ್ರನ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣ ಅವರಿಂದ ದೂರವಾಗಿದ್ದರು ರಂಭಾ.
ಈಗ ಮತ್ತೆ ಏನಾಯಿತೋ ಏನೋ ಗೊತ್ತಿಲ್ಲ. ತನ್ನ ಗಂಡನೊಂದಿಗೆ ಇರಲು ಅವಕಾಶ ಮಾಡಿಕೊಡಿ ಎಂದು ರಂಭಾ ನ್ಯಾಯಾಲಯವನ್ನು ಕೋರಿದ್ದಾರೆ. ಗಂಡನಿಂದ ತಿಂಗಳಿಗೆ ಎರಡೂವರೆ ಲಕ್ಷ ಕೇಳಿದ್ದಾರೆ ಎಂದರೆ ವಿಷಯ ಸ್ವಲ್ಪ ಗಂಭೀರವಾಗಿಯೇ ಇದೆ.
ಇದರ ಜತೆಗೆ ರಂಭಾ ಸಿನಿಮಾಗಳಲ್ಲಿ ಮತ್ತೆ ರೀ-ಎಂಟ್ರಿ ಕೊಡಲಿದ್ದಾರಂತೆ. ಹೀರೋಯಿನ್ ಪಾತ್ರ ಸಿಕ್ಕಿದರೆ ಅಭಿನಯಿಸುತ್ತೇನೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳ ಕಾರಣ ದೂರವಾಗಬೇಕು ಎಂದುಕೊಂಡೆವು. ಆದರೆ ನನಗೆ ಈಗ ನನ್ನ ಗಂಡನೇ ಸರ್ವಸ್ವ, ಅತ್ತೆ ಮನೆಯವರ ಕಾರಣದಿಂದ ನಾನು ದೂರವಾಗಬೇಕೆಂದುಕೊಂಡೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.