Webdunia - Bharat's app for daily news and videos

Install App

ಕೈಮುಟ್ಟಿ ಅನುಚಿತವಾಗಿ ವರ್ತಿಸಿದ ಅಭಿಮಾನಿಗೆ ನಟಿ ರಾಗಿಣಿ ಕಪಾಳಮೋಕ್ಷ

Sampriya
ಸೋಮವಾರ, 10 ಮಾರ್ಚ್ 2025 (16:11 IST)
Photo Courtesy X
ಬೆಂಗಳೂರು: ಕೈಮುಟ್ಟಿ ಅನುಚಿತ ವರ್ತನೆ ತೋರಿದ ಅಭಿಮಾನಿಯೊಬ್ಬನಿಗೆ ಕನ್ನಡದ ನಟಿ ರಾಗಿಣಿ ದ್ವಿವೇದಿ ಕಪಾಳಮೋಕ್ಷ ಮಾಡಿರುವ ಘಟನೆ ಈಚೆಗೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ದ್ವಿವೇದಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನಟಿ ರಾಗಿಣಿ ಕೂಡ ಎಲ್ಲರ ಜತೆ ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ನಟಿ ರಾಗಿಣಿ ಕೈಮುಟ್ಟಿ ಅನುಚಿತ ವರ್ತನೆ ತೋರಿದ್ದಾನೆ. ಇದರಿಂದ ಕೋಪಗೊಂಡ ನಟಿ ರಾಗಿಣಿ ಆತನ ಕಪಾಳಕ್ಕೆ ಭಾರಿಸಿದ್ದಾರೆ.

ಈ ಕುರಿತ ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ವೈರಲ್ ಆಗಿತ್ತಾದರೂ ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೆ ಕಪಾಳ ಮೋಕ್ಷದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆಗಿದ್ದೇನು:  ಎಂಜಿ ರೋಡ್‌ನಲ್ಲಿರುವ ಪಬ್‌ವೊಂದಕ್ಕೆ ನಟಿ ರಾಗಿಣಿ ಪಿಂಕ್ ಬಣ್ಣದ ಫ್ರಾಕ್ ಹಾಕಿ ಎಂಟ್ರಿಕೊಟ್ಟಿದ್ದರು. ಈ ವೇಳೆ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ರಾಗಿಣಿ ದ್ವಿವೇದಿ ಅವರು ಫ್ಯಾನ್ಸ್‌ಗೆ ಫೋಟೋ ನೀಡುತ್ತಿದ್ದ ವೇಳೆ ಅಲ್ಲೇ ಇದ್ದ ಅಭಿಮಾನಿಯೊಬ್ಬ ಅವರ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಮುಂದಿನ ಸುದ್ದಿ
Show comments