Select Your Language

Notifications

webdunia
webdunia
webdunia
webdunia

ಅಂದಕಾಲತ್ತಿಲ್ ನಟಿ ರಾಧಿಕಾ ಈಗ ಬಸ್ ಡ್ರೈವರ್

ನಟಿ ರಾಧಿಕಾ
ಬೆಳ್ಳಿತೆರೆಯ ಮೇಲೆ ಅದೆಷ್ಟೋ ಬೋಲ್ಡ್, ಡೇರಿಂಗ್ ಪಾತ್ರಗಳನ್ನು ಪೋಷಿಸಿದ ತಾರೆ ಆ ಕಾಲದ ರಾಧಿಕಾ ಈಗ ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಈ ಹಿಂದೆ ಎಂದೂ ಪೋಷಿಸದ, ಯಾರೂ ಊಹಿಸಲು ಸಾಧ್ಯವಾಗದಂತಹ ಪಾತ್ರ ಅದು.
 
ರಾಧಿಕಾ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಇಪ್ಪುಡ್ದಿ ವೆಲ್ಲುಮ್. ಉದಯನಿಧಿ, ಮಂಜಿಮ ಮೋಹನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಗೌರವ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹೀರೋ ತಾಯಿ ಪಾತ್ರದಲ್ಲಿ ರಾಧಿಕಾ ಕಾಣಿಸಲಿದ್ದಾರೆ.
 
ವಿಶೇಷ ಎಂದರೆ ಬಸ್ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಧಿಕಾ. ಇದಕ್ಕಾಗಿ ಬಸ್ ಡ್ರೈವಿಂಗ್ ಸಹ ಕಲಿತರಂತೆ. ವಿಲ್ಲುಪುರಂನಿಂದ ಚೆನ್ನೈಗೆ ಬಂದು ರಾಧಿಕಾಗೆ ಡ್ರೈವಿಂಗ್ ಕಲಿಸಿದ್ದಾರಂತೆ. ತುಂಬಾ ಕಡಿಮೆ ಸಮಯದಲ್ಲೇ ಸ್ಟೀರಿಂಗ್ ಹಿಡಿಯುವುದನ್ನು ಕಲಿತರಂತೆ ರಾಧಿಕಾ. ಈಗ ಸೆಟ್‌ನಲ್ಲಿ ಯಾರ ಸಹಾಯ ಇಲ್ಲದೆ ಬಸ್ ಓಡಿಸುವಷ್ಟರ ಮಟ್ಟಿಗೆ ಪಕ್ಕಾ ಆಗಿದ್ದಾರಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ ಅಂಜನಿಪುತ್ರ