Select Your Language

Notifications

webdunia
webdunia
webdunia
webdunia

ಲಿಪ್‍ಲಾಕ್, ಈಜುಡುಗೆ ಸೀನ್‍ಗಳಿಗೆ ನೋ ಎಂದ ಹೀರೋಯಿನ್

ಲಿಪ್‍ಲಾಕ್, ಈಜುಡುಗೆ ಸೀನ್‍ಗಳಿಗೆ ನೋ ಎಂದ ಹೀರೋಯಿನ್
Chennai , ಶನಿವಾರ, 21 ಜನವರಿ 2017 (13:07 IST)
ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸಬೇಕೆಂದರೆ ನಿರ್ದೇಶಕರು ಷರತ್ತುಗಳನ್ನು ವಿಧಿಸುತ್ತಿರುತ್ತಾರೆ. ಆದರೆ ಹೀರೋಯಿನ್ನೇ ಷರತ್ತುಗಳನ್ನು ಹಾಕುವಷ್ಟರ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ನೀವೇ ಊಹಿಸಿ. ಕಥೆ ಹೀಗೇ ಇರಬೇಕೆಂದು, ಪಾತ್ರ ಈ ತರಹ ಇದ್ದರೆ ಮಾತ್ರ ಅಭಿನಯಿಸುತ್ತೀನೆಂದು, ಬಟ್ಟೆ ಹೀಗೇ ಇರಬೇಕೆಂದು ಕಂಡೀಷನ್ಸ್ ಹಾಕುತ್ತಿರುತ್ತಾರೆ.
 
ಇನ್ನೂ ಕೆಲವರು ಕಥೆ ಸಂಪೂರ್ಣ ಕೇಳಿ ಬದಲಾವಣೆಯನ್ನೂ ತೋರಿಸುತ್ತಿರುತ್ತಾರೆ. ಸದ್ಯಕ್ಕೆ ದಕ್ಷಿಣದಲ್ಲಿ ಬಲು ಬೇಡಿಕೆ ಇರುವ ನಟಿ ನಯನತಾರಾ ಅದೇ ರೀತಿ ಕಂಡೀಷನ್ಸ್ ಹಾಕುತ್ತಿದ್ದಾರಂತೆ. ಸಂಭಾಷಣೆಯನ್ನೂ ಮೊದಲೇ ತಿಳಿದುಕೊಳ್ಳುತ್ತಾರಂತೆ. ಕಥೆ ಕೇಳುವ ಮುನ್ನ ಮೂರು ಷರತ್ತುಗಳನ್ನು ಮುಂದಿಡುತ್ತಿದ್ದಾರಂತೆ.
 
ಯಾವುದೇ ಕಾರಣಕ್ಕೂ ಲಿಪ್ ಲಾಕ್ ಮಾಡಲ್ಲ, ಈಜುಡುಗೆ ಹಾಕಿಕೊಳ್ಳಲ್ಲ, ಕೆರಳಿಸುವಂತೆ ತೊಡೆಗಳನ್ನು ತೋರಿಸುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ’ಇರುಮುಗನ್’ ಚಿತ್ರದ ಬಳಿಕ ಈ ರೀತಿಯ ಷರತ್ತುಗಳನ್ನು ವಿಧಿಸುತ್ತಿದ್ದಾರಂತೆ ನಯನತಾರಾ. ಕಥೆ ಕೇಳುತ್ತಿದ್ದಂತೆ ಸೆನ್ಸಾರ್ ಮಂಡಳಿಯವರಂತೆ ಅಲ್ಲಲ್ಲಿ ಕತ್ತರಿ ಹಾಕುತ್ತಾರೆ ನಯನಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಮಾಸ್ತಿಗುಡಿ' ಸಿನಿಮಾ ಟ್ರೈಲರ್