ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್

Krishnaveni K
ಬುಧವಾರ, 1 ಮೇ 2024 (13:55 IST)
Photo Courtesy: X
ಚಿಕ್ಕಮಗಳೂರು: ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಇಂದು ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಂಕಣಿ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡದಿದೆ. ಇಬ್ಬರ ಕುಟುಂಬಸ್ಥರು, ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಚಿಕ್ಕಮಗಳೂರಿನ ಕಳಸದಲ್ಲಿರುವ ಪುರಾತನ ವೆಂಕಟರಮಣ ದೇವಾಲಯದ ಸುಂದರ ಪರಿಸರದಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿವೆ.

ಎರಡು ದಿನಗಳಿಂದ ಇಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದವು. ಮೆಹಂದಿ ಶಾಸ್ತ್ರದಲ್ಲಿ ಮಾನ್ವಿತಾ ಆಪ್ತರು ಭಾಗಿಯಾಗಿದ್ದರು. ಇಂದು ತಾಳಿ ಶಾಸ್ತ್ರ ನೆರವೇರಿದೆ. ಹಿರಿಯರ ಸಮ್ಮುಖದಲ್ಲಿ ಮಾನ್ವಿತಾ ಕೊರಳಿಗೆ ಅರುಣ್ ತಾಳಿ ಕಟ್ಟಿದ್ದಾರೆ.

ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದು ಮಾನ್ವಿತಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಾನ್ವಿತಾ ಕಳೆದ ವರ್ಷವಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ವೈಯಕ್ತಿಕ ಜೀವನದಲ್ಲಿ ತೀರಾ ಸಂಕಷ್ಟಕ್ಕೀಡಾಗಿದ್ದ ನಟಿಯ ಮುಖದಲ್ಲಿ ಈಗ ನೆಮ್ಮದಿ ಮೂಡಿದೆ. ಮದುವೆ ಬಳಿಕವೂ ಸಿನಿಮಾದಲ್ಲಿ ನಟಿಸುವುದಾಗಿ ಮಾನ್ವಿತಾ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಎರಡನೇ ಮದುವೆಗೆ ಸಜ್ಜಾದ ರಘು ದೀಕ್ಷಿತ್: ಹುಡುಗಿ ಕೂಡಾ ಫೇಮಸ್, ವಯಸ್ಸಿನ ಅಂತರ ಎಷ್ಟು ಗೊತ್ತಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ಮುಂದಿನ ಸುದ್ದಿ
Show comments