Webdunia - Bharat's app for daily news and videos

Install App

ಟಗರಿನ ಜತೆ ಪೊಗರಿನ ಹುಡುಗಿ ಭಾವಾನಾ ಮೆನನ್

Webdunia
ಶುಕ್ರವಾರ, 13 ಜನವರಿ 2017 (13:30 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಟಗರು ಚಿತ್ರಕ್ಕೆ ಹೊಸ ಹೀರೊಯಿನ್ ಸಿಕ್ಕಿದ್ದಾರೆ. ಆಕೆ ಬೇರೆ ಯಾರು ಅಲ್ಲ ಭಾವನಾ ಮೆನನ್. ನಿರ್ದೇಶಕ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದ್ದು, ಕೆಂಡಸಂಪಿಗೆ ಖ್ಯಾತಿಯ ಮಾನ್ವಿತಾ ಹರೀಶ್ ಚಿತ್ರದ ಇನ್ನೊಬ್ಬ ನಾಯಕಿ.
 
ಭಾವನಾ ಮೆನನ್ ಈ ಹಿಂದೆ ಕನ್ನಡದ ಜಾಕಿ, ವಿಷ್ಣುವರ್ಧನ, ರೋಮಿಯೋ, ಟೋಪಿವಾಲಾ, ಮುಕುಂದ ಮುರಾರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಧನಂಜಯ್, ವಸಿಷ್ಠ ಸಿಂಹ ಸಹ ಪಾತ್ರವರ್ಗದಲ್ಲಿದ್ದಾರೆ. ಮೈಯಲ್ಲಿ ಪೊಗರು ಎಂಬುದು ಚಿತ್ರದ ಅಡಿಬರಹ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಇದೆ.
 
ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಚಿತ್ರ. ಇದೊಂದು ಪಕ್ಕಾ ಮಾಸ್‌ ಸಿನಿಮಾ.  ಈ ಸಿನಿಮಾ ಮೂಲಕ ಮಾಸ್‌ ಅಂದರೆ ಏನು, ಹೇಗಿರುತ್ತೆ ಅಂತ ತೋರಿಸಲು ಹೊರಟಿದ್ದಾರೆ ಸೂರಿ. ರೌಡಿಸಂನ ಇನ್ನೊಂದು ವರ್ಷನ್‌ ಹೇಳಲು ಹೊರಟಿದ್ದಾರಂತೆ. ಎಂದಿನಂತೆ ಇದೂ ಕೂಡ ಸ್ಕ್ರೀನ್‌ಪ್ಲೇ ಓರಿಯೆಂಟೆಡ್‌ ಸಿನಿಮಾ. ಇಲ್ಲಿ "ಟಗರು' ಪಾತ್ರವನ್ನು ಶಿವಣ್ಣ ಬಿಟ್ಟರೆ, ಬೇರೆ ಯಾರೂ ಮಾಡಕ್ಕಾಗುವುದಿಲ್ಲ. ಹಾಗಾಗಿ ಅವರಿಗಾಗಿಯೇ "ಟಗರು' ಮಾಡುತ್ತಿದ್ದೇವೆ. ಇದುವರೆಗೆ ಬಂದಂತಹ ರೌಡಿಸಂ ಚಿತ್ರಗಳಲ್ಲೇ ಇದು ಹೊಸದಾಗಿ ಕಾಣುವ ಚಿತ್ರ ಮತ್ತು ಕಥೆಯ ಲೈನ್‌ ಕೂಡ ಹೊಸದಾಗಿದೆ ಎಂಬುದು ನಿರ್ದೇಶಕ ಸೂರಿ ಅವರ ಮಾತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಚಿತ್ರರಂಗದವರಿಗೆ ಗೌರವ ಕೊಡಿ ಎಂದ ಕಿಚ್ಚ ಸುದೀಪ್ ಗೆ ಡಿಕೆ ಶಿವಕುಮಾರ್ ಹೇಳಿದ್ದೇನು

ದೇವರೇ ಬಂದು ಹೇಳಿದ್ರೂ ಕ್ಷಮೆ ಕೇಳಲ್ಲ ಎಂದ ರಚಿತಾ ರಾಮ್: ನಾವಿದ್ದೀವಿ ಎಂದ ಡಿ ಬಾಸ್ ಫ್ಯಾನ್ಸ್

ಮುಂದಿನ ಸುದ್ದಿ
Show comments