Webdunia - Bharat's app for daily news and videos

Install App

ಸುದೀಪ್-ಶಿವಣ್ಣ ಜೋಡಿ ಚಿತ್ರಕ್ಕೆ ಎಮಿ ಜಾಕ್ಸನ್ ನಾಯಕಿ

Webdunia
ಶುಕ್ರವಾರ, 13 ಜನವರಿ 2017 (11:29 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜತೆಯಾಗಿ ಅಭಿನಯಿಸುತ್ತಿರುವ ’ದ ವಿಲನ್’ ಚಿತ್ರಕ್ಕೆ ಬೊಂಬಾಟ್ ಬೆಡಗಿ ಸಿಕ್ಕಿದ್ದಾರೆ. ಪ್ರೇಮ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಎಮಿ ಜಾಕ್ಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತಿವೆ ಗಾಂಧಿನಗರ ಮೂಲಗಳು.
 
ಈ ಹಿಂದೆ ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಕೇಳಿಬಂದಿತ್ತು. ಒಂದಷ್ಟು ಬಾಲಿವುಡ್ ನಟಿಯರ ಹೆಸರು ಹರಿದಾಡಿತ್ತು. ಈಗ ಎಮಿ ಜಾಕ್ಸನ್ ನಾಯಕಿ ಎನ್ನಲಾಗಿದೆ. ಸದ್ಯಕ್ಕೆ ರಜನಿಕಾಂತ್ ಅಭಿನಯದ ಶಂಕರ್ ನಿರ್ದೇಶನದ 2.0 ಚಿತ್ರದಲ್ಲಿ ಎಮಿ ಜಾಕ್ಸನ್ ಅಭಿನಯಿಸುತ್ತಿದ್ದು, ಅದಾದ ಕೂಡಲೆ ಕನ್ನಡಕ್ಕೆ ಕರೆತರಲಿದ್ದಾರಂತೆ ಪ್ರೇಮ್.
 
ಪ್ರೇಮ್ ತಮ್ಮ ಹಿಂದಿನ ಚಿತ್ರಗಳಿಗೆ ಮಲ್ಲಿಕಾ ಶೆರಾವತ್, ಸನ್ನಿ ಲಿಯೋನ್‌ರನ್ನೇ ಕರೆತಂದಿದ್ದರು. ಇನ್ನು ಎಮಿ ಜಾಕ್ಸನ್ ಕರೆತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದೆ ಗಾಂಧಿನನಗರ ಪಡಸಾಲೆ. ಎಮಿ ಆಗಮನವನ್ನು ಅಧಿಕೃತವಾಗಿ ಘೋಷಿಸುವುದೊಂದು ಬಾಕಿ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಮುಂದಿನ ಸುದ್ದಿ
Show comments