Publish Date: Thu, 23 Feb 2017 (18:08 IST)
Updated Date: Thu, 23 Feb 2017 (18:13 IST)
ಕನ್ನಡದ ನಟಿ ಅಮೂಲ್ಯಗೆ ಕಂಕಣಭಗ್ಯ ಕೂಡಿ ಬಂದಿದೆ. ರಾಜರಾಜೇಶ್ವರಿ ನಗರದ ಜಗದೀಶ್ ಎಂಬುವವರ ಜೊತೆ ಮಾರ್ಚ್ 6ಕ್ಕೆ ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.
ಗಣೇಶ್ ಮನೆಯಲ್ಲಿ ಅಮೂಲ್ಯ ಮತ್ತು ಜಗದೀಶ್`ಗೆ ಪರಿಚಯವಾಗಿತ್ತು. ಬಳಿಕ ರಡೂ ಕುಟುಂಬಗಳು ಪರಸ್ಪರ ಪ್ಪಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿವೆ ಎನ್ನಲಾಗಿದೆ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿ ವಾಪಸ್ಸಾಗಿರುವ ಜಗದೀಶ್ ಮಾಜಿ ಕಾರ್ಪೊರೇಟರ್ ಪುತ್ರ ಎನ್ನಲಾಗಿದೆ.
ಸೂಪರ್ ಹಿಟ್ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇರೂರಿದ ನಟಿ ಅಮೂಲ್ಯ. ಗಣೇಸ್ ಮತ್ತು ಅಮೂಲ್ಯ ಜೋಡಿ ಸ್ಯಾಂಡಲ್`ವುಡ್`ನಲ್ಲಿ ಮೋಡಿ ಮಾಡಿತ್ತು.