Select Your Language

Notifications

webdunia
webdunia
webdunia
webdunia

ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ

ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ
ಬೆಂಗಳೂರು , ಬುಧವಾರ, 10 ಮೇ 2017 (11:14 IST)
ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರಿಗೆ ಈಗ ಮದುವೆಯ ಸಂಭ್ರಮ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಜಗದೀಶ್ ಅವರ ಜೊತೆ ಶುಕ್ರವಾರ ಆದಿಚುಂಚನಗಿರಿ ಮಠದಲ್ಲಿ ನಟಿ ಅಮೂಲ್ಯ ವಿವಾಹ ನೆರವೇರಲಿದೆ.

ಇದಕ್ಕೂ ಮುನ್ನ ಇವತ್ತು ಸಂಜೆ ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಲಿದೆ. ಶಿಲ್ಪಾ ಗಣೇಶ್ ಅಮೂಲ್ಯಗಾಗಿ ಸ್ವತಃ ತಾವೇ ಕಾರ್ಯಕ್ರಮ ಆಯೋಜಿಸಿದ್ದು, ಖುದ್ದು ತಾವೇ ತಯಾರಿ ನಡೆಸಿದ್ದಾರೆ. ಪಂಜಾಬಿ ಮತ್ತು ಬಾಂಗ್ರಾ ನೃತ್ಯ ಕಲಾವಿದರು ಸಹ ಕಾರ್ಯಕ್ರಮಕ್ಕೆ ರಂಗು ನೀಡಲಿದ್ದಾರೆ.

ಅಮೂಲ್ಯ ಮೆಹಂದಿ ಕಾರ್ಯಕ್ರಮದಲ್ಲಿ ಚಿತ್ರ ತಾರೆಯರೂ ಭಾಗವಹಿಸುವ ಸಾಧ್ಯತೆ ಇದೆ. ಸಂಪೂರ್ಣ ಉತ್ತರಭಾರತ ಶೈಲಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮೇ 12ರಮದು ವಿವಾಹ ನೆರವೇರಲಿದ್ದು, ಮೇ 16ಕ್ಕೆ ಆರತಕ್ಷತೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೆ!